ಹಾಡುಹಗಲೇ ಅಡಿಕೆ ತೋಟದಲ್ಲಿರುವ ಅಡಿಕೆ ಮರದಲ್ಲಿದ್ದ 10 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕೊಯ್ದು ಕಳ್ಳರು ಕದ್ದೊಯ್ದ ಘಟನೆ ಯಲ್ಲಾಪುರ ತಾಲೂಕಿನ ದೋಣಗಾರದಲ್ಲಿ ನಡೆದಿದೆ.

ಬುಧವಾರ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪದ ದೋಣಗಾರಿನ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ತೋಟದಲ್ಲಿರುವ 35 ರಿಂದ 40 ಮರಗಳಲ್ಲಿದ್ದ ಅಂದಾಜು 1 ಲಕ್ಷ ರೂ ಮೌಲ್ಯದ 10 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕೊಯ್ದು ಕಳ್ಳರು ಕದ್ದೊಯ್ದಿದ್ದಾರೆ.

ಅಡಿಕೆ ಕದ್ದೊಯ್ದ ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವೇಶ್ವರ ಹೆಬ್ಬಾರ್ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading