ಹಾಡುಹಗಲೇ ಅಡಿಕೆ ತೋಟಕ್ಕೆ ನುಗ್ಗಿ ಮರದಲ್ಲಿದ್ದ ಹತ್ತು ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕೊಯ್ದು ಕದ್ದೊಯ್ದಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬುಧವಾರ ಬೆಳಿಗ್ಗೆ 9-30 ಗಂಟೆಯಿಂದ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಅಡಿಕೆ ತೋಟದಲ್ಲಿದ್ದ ಸುಮಾರು 35 ರಿಂದ 40 ಮರಗಳಲ್ಲಿರುವ ಸುಮಾರು 1 ಲಕ್ಷ ರೂಪಾಯಿ ಬೆಲೆಬಾಳುವ 10 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಡಿಕೆ ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಡಗುಂದಿ ಸಮೀಪದ ದೋಣಗಾರಿನ ವಿಶ್ವೇಶ್ವರ ಹೆಬ್ಬಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳಾದ ಮಂಚಿಕೇರಿ ಸಮೀಪದ ಬೆಂಡಿಗೇರಿಯ ಕೂಲಿ ಕೆಲಸದ ಹರುಷ ತಂದೆ ಈರಪ್ಪ ಬೋವಿವಡ್ಡರ (ಪ್ರಾಯ 24 ವರ್ಷ)
ಹಾಗೂ ಶಿರಸಿ ತಾಲೂಕಿನ ಗೌಡಳ್ಳಿ ಸಮೀಪದ ಕೊಗುಲಕೊಳಿಯ ಭಾಸ್ಕರ ತಂದೆ ಕೃಷ್ಣ ಬೋವಿವಡ್ಡರ ( 19 ವರ್ಷ ) ಎಂಬುವವರನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಅಡಿಕೆ ಕಳ್ಳತನ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 50 ಸಾವಿರ ರೂ ಮೌಲ್ಯದ 4 ಕ್ವಿಂಟಾಲ್ 54 ಕೆಜಿ 870 ಗ್ರಾ ತೂಕದ ಕಳ್ಳತನ ಮಾಡಿದ್ದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading