ಹೈನುಗಾರಿಕೆ ದೊಡ್ಡ ಲಾಭದ ಉದ್ಯೋಗವಲ್ಲದಿರಬಹುದು, ಆದರೆ ಅದನ್ನು ತಿಳಿದು ಮಾಡಿದರೆ ನಷ್ಟದ ಕೆಲಸವಂತೂ ಅಲ್ಲ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಹೆಗಡೆ ಜಾಜಿಮನೆ ಹೇಳಿದರು.

ಯಲ್ಲಾಪುರ ತಾಲೂಕಿನ ಬಾಳೆಗದ್ದೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ಜಾನುವಾರು ಸಾಕಣೆ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅವರು ಮಾತನಾಡಿ, ದನಗಳಿಂದ ಬರುವ ಸಗಣಿಯೂ ನಮ್ಮ ಬದುಕಿಗೆ ಆಸರೆ ಯಾಗುತ್ತದೆ. ಹಾಲಂತೂ ನಿತ್ಯ ನಮಗೆ ಒದಗಿ ಬರುವ ಆದಾಯವಾಗಿದೆ. ಹೀಗಿರುವಾಗ ಪಶುಸಂಗೋಪನೆಯ ಬಗ್ಗೆ ಹೆಚ್ಚಿನ ಗಮನ ಅಗತ್ಯ ಎಂದರು.

ಯೋಜನೆಯ ಕೃಷಿ ಅಧಿಕಾರಿ ಚನ್ನಬಸಪ್ಪ ಅವರು ಮಾತನಾಡಿ, ಪಶುಸಂಗೋಪನೆ, ಸರಿಯಾಗಿ ನಿರ್ವಹಣೆ ಮಾಡಿದರೆ ನಿಮಗೆ ಅದು ನಿತ್ಯ ಒಂದಿಷ್ಟು ಹಣ ಒದಗಿಸುವ ಎಟಿಎಂ ಇದ್ದಹಾಗೆ. ಸಗಣಿಯನ್ನು ಸಂಸ್ಕರಿಸಿ ಗೊಬ್ಬರ ಮಾಡಿ ಮಾರುವುದರಿಂದ ಕೂಡ ಲಾಭಗಳಿಸಬಹುದು ಎಂದರು. ವೇದಿಕೆಯಲ್ಲಿ ಉಮ್ಮಚ್ಗಿ ಪಂಚಾಯತದ ಸ್ಥಳೀಯ ಜನಪ್ರತಿನಿಧಿ ಗ.ರಾ.ಭಟ್ಟ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸರಸ್ವತಿ ನಾಯ್ಕ ನಿರ್ವಹಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading