ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲಕೇರಿ ಗೌಳಿವಾಡದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಗಂಗಾಧರ ಲಮಾಣಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಳೆದ 16 ವರ್ಷಗಳಿಂದ ಸತತ ಸೇವೆ ಸಲ್ಲಿಸಿ ಅಲಕೇರಿ ಗೌಳಿವಾಡ ಮತ್ತು ಟಿಂಗಿನಗೇರಿ ಶಾಲೆಯ ಮಕ್ಕಳ ಭವಿಷ್ಯ ಉಜ್ವಲ ಮಾಡಿದ ಗಂಗಾಧರ ಲಮಾಣಿಯವರಿಗೆ ಸ್ಥಳೀಯ ಗ್ರಾಮದೇವಿ ಯುವಕ ಮಂಡಳಿ ಅಲಕೇರಿ ಗೌಳಿವಾಡದ ವತಿಯಿಂದ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.

ಇವರು ಬರೆದಿರುವ ನಮ್ಮ ಪಯಣ ಎಂಬ ಪುಸ್ತಕದಲ್ಲಿ ಅಲಕೇರಿ ಗೌಳಿವಾಡದ ಧನಗರ ಗೌಳಿ ಸಮುದಾಯದ ಸಂಸ್ಕøತಿ, ಪುರಾಣ, ಪರಂಪರೆ ಹಾಗೂ ಆಚಾರ ವಿಚಾರಗಳನ್ನು ನಮೂದಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ನಮ್ಮ ಮಕ್ಕಳಿಗೆ ಈ ಪುಸ್ತಕ ಓದಿ ನಮ್ಮ ಊರಿನ ಇತಿಹಾಸ ಓದಬಹುದು ಎಂದು ಸ್ಥಳಿಯ ಪ್ರಮುಖರಾದ ಮನೋಹರ ದೊಂಡು ಬಾಜಾರಿಯವರು ಶಿಕ್ಷಕರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಗಂಗಾಧರ ಅವರ ಮುಂದಿನ ಶೈಕ್ಷಣಿಕ ಜೀವನ ಒಳ್ಳೆಯದಾಗಲಿ ಎಂದು ಅಲಕೆರಿ ಗೌಳಿವಾಡ ಹಿರಿಯರು ಆಶಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading