ಆಶಿಯ ಸಮಾಜ ಸೇವಾ ಸಂಸ್ಥೆ, ಓಂ ಫೌಂಡೇಶನ್ ಯಲ್ಲಾಪುರ ಇವುಗಳ ವತಿಯಿಂದ ಹಳಿಯಾಳದಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಹಳಿಯಾಳ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ನಂ-3 ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ ಹಾಗೂ ರೋಗ ರುಜಿನಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವದರ ಕುರಿತು ಜಾಗೃತಿ ಮೂಡಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಅನಿಲ್ ಮರಾಠೆ ಮಾತನಾಡಿ, ನಿತ್ಯ ಜೀವನದಲ್ಲಿ ಆರೋಗ್ಯದ ಕುರಿತು ಕಾಳಜಿ ಬಹಳ ಮುಖ್ಯವಾಗಿದ್ದು, ಸ್ವಚ್ಛತೆ ಹಾಗೂ ಶಿಸ್ತುಬದ್ಧತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ವಿಜಯ ನಾಯಕ ಮಾತನಾಡಿ, ನಿಯಮಬದ್ಧವಾಗಿ ಕೈ ತೊಳೆಯುವುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿ ರೋಗಾಣುಗಳು ನಮ್ಮ ದೇಹಕ್ಕೆ ಯಾವ ರೀತಿ ಆಕ್ರಮಣ ಮಾಡುತ್ತವೆ ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವ ಬಗೆಯ ಬಗ್ಗೆ ವಿವರಿಸಿದರು.

ಶಾಲೆಯ ಮುಖ್ಯಾಧ್ಯಾಪಕ ಮಹೇಶ್ ವೈ ಚೀಟ್ಪತ್ತಿ ಮಾತನಾಡಿ, ಸಂಸ್ಥೆಯ ಉಚಿತ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಸಹ ಶಿಕ್ಷಕರಾದ ಕಲಾವತಿ ನಿಟ್ಟೂರ್, ಸುಮಾ ಹಡಪದ, ಸುಮಂಗಲ ಹಸ್ಮಠ ಹಾಗೂ ಸಂಸ್ಥೆಯ ಹಳಿಯಾಳ ವಿಭಾಗದ ಪದಾಧಿಕಾರಿಗಳಾದ ಕಾಶಿನಾಥ್, ಸರಸ್ವತಿ, ವಿಜಯಲಕ್ಷ್ಮಿ ಮಿರಾಶಿ,ಉಮೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading