ಯಲ್ಲಾಪುರ ತಾಲೂಕಿನ ಹಾಸಣಗಿ ಪಂಚಾಯತ ವ್ಯಾಪ್ತಿ ಹೊನ್ನಳ್ಳಿಯಲ್ಲಿ ವ್ಯಕ್ತಿಯೊಬ್ಬರ ಮನೆಯ ಸಮೀಪವೇ ಹಸುವನ್ನು ಹುಲಿ ಹಿಡಿದು ತಿಂದ ಘಟನೆ ನಡೆದಿದೆ. ದೇವರಕಲ್ಲಳ್ಳಿ ಊರಿನ ರಮೇಶ ಎನ್ನುವವರಿಗೆ ಸೇರಿದ ಮೇವಿಗೆ ಬಿಟ್ಟ ಆಕಳನ್ನು ಹುಲಿ ಹಿಡಿದು ತಿಂದು ಹಾಕುವ ಮೂಲಕ ಈ ಭಾಗದ ಜನರು ಆತಂಕಗೊಳ್ಳುವಂತೆ ಮಾಡಿದೆ.

ಕಳೆದೆರಡು,ಮೂರು ತಿಂಗಳಿಂದೀಚೆಗೆ ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಹದೈನೈದಕ್ಕೂ ಹೆಚ್ಚು ಹಸುಗಳು ಹುಲಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಹೊನ್ನಳ್ಳಿ ಶಂಭು ಸಿದ್ದಿ ಎನ್ನುವವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ ಜಾನುವಾರು ಹುಲಿಗೆ ಆಹಾರವಾಗಿದೆ. ಪ್ರಸ್ತುತ ದೇವರಕಲ್ಲಳ್ಳಿ ರಮೇಶ ಅವರ ಹಸುವನ್ನು ಹುಲಿ ಹಿಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಸಿಬ್ಬಂಧಿ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ, ಪಶು ವೈದ್ಯ ಡಾ. ರಾಜೇಶ್ ಅವರು ಪಂಚನಾಮೆ ನಡೆಸಿದ್ದಾರೆ.

ಇಂತಹ ಘಟನೆಗಳು ಸಂಭವಿಸದಂತೆ ಎಲ್ಲರೂ ಸೇರಿ ಪ್ರಯತ್ನಿಸಬೇಕು. ಅರಣ್ಯ ಇಲಾಖೆಯವರು ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading