ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ PMJF ಜಯಅಮೋಲ್ ನಾಯ್ಕ ಹಾಗೂ ಲಯನ್ಸ್ ಕ್ಲಬ್ ಕ್ಯಾಬಿನೆಟ್ ಕಾರ್ಯದರ್ಶಿ PMJF ಕೀರ್ತಿ ನಾಯ್ಕ ಅವರು ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿ ಟೌನ್ ಲಯನ್ಸ್ ಕ್ಲಬ್ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಸಮಾರಂಭದಲ್ಲಿ ಟೌನ್ ಲಯನ್ಸ್ ಕ್ಲಬ್ MJF ಅಧ್ಯಕ್ಷ ಶೇಷಗಿರಿ ಪ್ರಭು ಅವರು ಜಯಅಮೋಲ್ ನಾಯ್ಕ ಹಾಗೂ ಕೀರ್ತಿ ನಾಯ್ಕ ಅವರನ್ನು ಸ್ವಾಗತಿಸಿದರು. ಟೌನ್ ಲಯನ್ಸ್ ಕ್ಲಬ್ ನ ಕಾರ್ಯಚಟುವಟಿಕೆಗಳಿಗೆ ಜಯಅಮೋಲ್ ನಾಯ್ಕ ಹಾಗೂ ಕೀರ್ತಿ ನಾಯ್ಕ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಶೇಷಗಿರಿ ಪ್ರಭು ಹಾಗೂ ಕ್ಲಬ್ ನ ಕಾರ್ಯಕಾರಿಣಿ ಸದಸ್ಯರಾದ ಸುರೇಶ ಭಟ್ಟ ಅವರನ್ನು ಗವರ್ನರ್ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಶಿವಲಿಂಗಯ್ಯ ಅಲ್ಲಯ್ಯನವರಮಠ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜನಾರ್ದನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಸುರೇಶ ಬೋರ್ಕರ್, ಶಾಂತಾರಾಮ ಹೆಗಡೆ, ನಂದನ ಬಾಳಗಿ, ಎಸ್.ಎನ್.ನಾಯ್ಕ, ಮಂಜುನಾಥ ನಾಯ್ಕ, ಮೋಹನ ನಾಯ್ಕ, ರವಿರಾಜ ಪ್ರಭು, ಮೋಹನ ರೇವಣ್ಕರ್, ಗೋಪಾಲ ನೇತ್ರೇಕರ್, ವೀಣಾ ಭಟ್ಟ, ಸುನಂದಾ ಪಾಟಣಕರ್, ವಿನಯಾ ಪ್ರಭು, ಮಂಜುಳಾ ನಾಯ್ಕ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ನೂತನ ಸದಸ್ಯರಾಗಿ ಭವ್ಯಾ ಶೆಟ್ಟಿ ಮತ್ತು ಶ್ರೀನಿವಾಸ ಭಟ್ಟ ಸೇರ್ಪಡೆಯಾದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading