




15-3-2026 ರವಿವಾರ ಯಲ್ಲಾಪುರ
ಶಿವಶಂಕರ ನಿಲಯದಲ್ಲಿ ನನ್ನ ಪುಸ್ತಕ ಅವಲೋಕನ, ಉಪನ್ಯಾಸ, ಕವಿಗೋಷ್ಠಿ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ ನನ್ನ ಪುಸ್ತಕದ ಅವಲೋಕನ ಹಾಗೂ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಶಿವಶಂಕರ ನಿಲಯದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ನನ್ನ ಪುಸ್ತಕ ಅವಲೋಕನ ವಿನೂತನ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಮಾತನಾಡಿ, ನಾವು ನಮ್ಮ ಪುಸ್ತಕದ ಅವಲೋಕನಕ್ಕೆ ಒಳಪಡಿಸುವುದರಿಂದ ಆ ಪುಸ್ತಕದ ನೈಜತೆ ಮತ್ತು ಮೌಲ್ಯದ ಅರಿವಾಗುತ್ತದೆ. ನಮ್ಮ ಪುಸ್ತಕ ಇನ್ನೊಬ್ಬರಿಗೆ ವರ್ಗಾಯಿಸುವ ಮೂಲಕ ಕವಿತ್ವದ ಶಕ್ತಿ ಮತ್ತು ಸುಧಾರಿಸಿಕೊಳ್ಳಬೇಕಾದ ಉತ್ತಮ ಅಂಶಗಳನ್ನು ಅಳವಡಿಕೊಳ್ಳಲು ಸುಲಭವಾಗಿತ್ತದೆ. ಬರೆದರಷ್ಟೇ ಸಾಲದು ಓದುಗರನ್ನು ಹುಟ್ಟು ಹಾಕುವುದು ಅಷ್ಟೇ ಮಹತ್ವದ ವಿಚಾರ. ಈ ನಿಟ್ಟಿನಲ್ಲಿ ಪುಸ್ತಕ ಅವಲೋಕನ ವಿನೂತನ ಕಾರ್ಯಕ್ರಮವು ಯಲ್ಲಾಪುರ ತಾಲೂಕಿನ ಮತ್ತು ಜಿಲ್ಲೆಯ ಆಸಕ್ತ ಕವಿಗಳ ಪುಸ್ತಕ ಅವಲೋಕನಕ್ಕೆ ನಮ್ಮ ವೇದಿಕೆ ಸ್ವಾಗತ ಕೋರುತ್ತದೆ ಮತ್ತು ಈ ಎಲ್ಲ ಅವಲೋಕನಗಳನ್ನು ಪುಸ್ತಕ ರೂಪದಲ್ಲಿ ತರುವ ಯೋಚನೆಯಿದೆ. ಸಾಹಿತ್ಯ ಪ್ರಕಾರಗಳು ಸಾಹಿತಿಗಳ ಅಂತರಾಳದ ಕೂಸುಗಳು, ಓದೋಣ, ಓದಿನೊಂದಿಗೆ ಅರಿವಿನ ಕಾರ್ಯ ಹಂಚೋಣ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸ.ಪ್ರ.ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಆರ್.ಡಿ ಜನಾರ್ದನ ಮಾತನಾಡಿ, ಕವಿತೆಯನ್ನು ಓದುವ ಮತ್ತು ಅದನ್ನು ಅರ್ಥಗರ್ಭಿತ ರೀತಿಯಲ್ಲಿ ವಾಚಿಸುವ ವಿಧಾನ ಅರಿತಷ್ಟು ಆ ಕವಿತೆಯ ಒಳಾರ್ಥ ಕಳೆ ಕಟ್ಟುತ್ತದೆ. ಸ್ವರಭಾರಯುಕ್ತ ಓದು ಮಾತ್ರ ಸಹೃದಯಿಯನ್ನು ತಲುಪಲು ಸಾಧ್ಯ, ಹಾಗೆ ಕವಿಯ ನಿಜವಾದ ಭಾವ ಅರಿಯಲು ಅಸಾಧ್ಯ ಎಂದರು..
ಉಪನ್ಯಾಸಕರಾಗಿ ಆಗಮಿಸಿದ ಡಾ.ಲಕ್ಷ್ಮೀಶ ಹೆಗಡೆ ಸೊಂದಾ ಮಾತನಾಡಿ, ಯಲ್ಲಾಪುರದ ಐತಿಹಾಸಿಕವಾಗಿ ಹೊಂದಿರುವ ಮಜಲುಗಳನ್ನು ಹಾಗೂ ಇಲ್ಲಿ ಸಿಕ್ಕಿರುವ ಶಾಸನಗಳು ಏನನ್ನು ಹೇಳುತ್ತವೆ. ಬನವಾಸಿ,ಕಂಪ್ಲಿ,ಯಲ್ಲಾಪುರ ಹಿಂದೆ ಯಾವ ಯಾವ ರಾಜಮನೆತನಗಳಿಂದ ಆಳಲ್ಪಟ್ಟಿತ್ತು ನಮ್ಮೂರ ಇತಿಹಾಸ ಹೊಸ ದಿಕ್ಕನ್ನು ಸೂಚಿಸುತ್ತದೆ ಎಂಬುದನ್ನು ಆದಷ್ಟು ಬೇಗ ಯಲ್ಲಾಪುರ ಇತಿಹಾಸದ ಬಗ್ಗೆ ಪುಸ್ತಕ ಬರೆಯುತ್ತೆನೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಕವಿತೆಗಳು ಓದುಗರಿಗೆ ತಲುಪುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ. ಓದುವ ಪರಂಪರೆ ಮಾಯವಾಗುತ್ತಿದೆ. ಇಂತಹ ಸಮಯದಲ್ಲಿ ನನ್ನ ಪುಸ್ತಕದ ಅವಲೋಕನ ಪುನಃ ಓದುವುದರತ್ತ ವಾಲುವಂತೆ ಮಾಡುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.

ಲೇಖಕ ಡಾ.ನವೀನಕುಮಾರ ಎ.ಜಿ. ಕವನಸಂಕಲನ ಇಂಗಿತ ಪುಸ್ತಕದ ಅವಲೋಕನವನ್ನು ಪವಿತ್ರಾ ಆರ್ ಆಗೇರ ಮಾಡಿ, ಕವನಸಂಕಲನ ಒಳಗೊಂಡ ಅನೇಕ ಅರ್ಥ ವೈವಿಧ್ಯತೆಯನ್ನು ಮತ್ತು 78 ಕವಿತೆಗಳ ಭಾವಾರ್ಥವನ್ನು ಮತ್ತು ಕವಿಯ ಆಶಾಭಾವದ ಜೊತೆಗೆ ಸಮಾಜದ ಅನಿಷ್ಟ ಪದ್ದತಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹೊಮ್ಮಿದ ಪ್ರಕ್ರಿಯೆಯನ್ನು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳ ಹೊತ್ತ ಕವನಗಳ ಕುರಿತು ಅವಲೋಕಿಸಿದರು.
ವಿಶೇಷ ಕವಿಗೋಷ್ಠಿ
ಕಾರ್ಯಕ್ರಮದಲ್ಲಿ ನ.ಚೇಸಾಂ.ಕ.ವೇ ಸಂಘಟನೆಯ ಮಂಜುನಾಥ ಪಟಗಾರ, ಸಾಹಿತಿ ಶ್ರೀರಂಗ ಕಟ್ಟಿ, ಲೇಖಕ ಡಾ.ನವೀನಕುಮಾರ ಎ.ಜಿ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ ಮಹಿಳೆ ವಿಷಯ ಕುರಿತಾದ ವಿಶೇಷ ಕವಿಗೋಷ್ಠಿ ಏರ್ಪಡಿಸಲಾಗಿತ್ತು.
ಕವಿಗಳಾದ ಶರೀಪ ಹಾರ್ಸಿಕಟ್ಟಾ, ಸುಬ್ರಾಯ ಗಾಂವ್ಕರ, ಡಾ.ಸುಚೇತಾ ಮದ್ಗುಣಿ, ದೀಲಿಪ ದೊಡ್ಮನಿ, ರವಿಕುಮಾರ್ ಕೆ.ಎನ್, ರವಿಶೇಷಗಿರಿ, ಸಂಗೀತಾ ಲಮಾಣಿ, ಪಾರ್ವತಿ ಕಟ್ಟಿಮನಿ, ರಾಘವೇಂದ್ರ ಪಟಗಾರ, ಸುನಂದಾ ಪಾಟಣಕರ. ಮಧುಕೇಶವ ಭಾಗ್ವತ, ಮಾರುತಿ ಆಚಾರಿ, ತ್ರೇಷಾ ನೋಹಾ, ವೀರವ್ವ ಪೂಜಾರಿ, ಸುಮಂಗಲಾ ವೆರ್ಣೇಕರ, ಕೃಷ್ಣ ನಾಯಕನಕೆರೆ, ಸತೀಶ ಶೆಟ್ಟಿ, ಗೌತಮಿ ನಾರಾಯಣಕರ, ಪ್ರೀಯಾ ಲಮಾಣಿ, ಸಾನಿಕಾ ಪಟಗಾರ, ದರ್ಶಿನಿ ಸಿದ್ದಿ, ಹೇಮಾ ಸಿದ್ದಿ, ಆಶಾ, ಚಂದ್ರಶೇಖರ ಎಸ್.ಸಿ.ವಿನೋದ ಐಗಳ, ರಾಧಾ ಭಟ್ಟ, ಶಂಕರ ನಾಯಕ, ಶ್ರೀರಕ್ಷಾ ವೆರ್ಣೇಕರ ಪ್ರಾರ್ಥಿಸಿದರು. ಸುನಂದಾ ಪಾಟಣಕರ ಸ್ವಾಗತಿಸಿದರು. ರಾಘವೇಂದ್ರ ಪಟಗಾರ ನಿರ್ವಹಿಸಿದರು. ಸುಧಾಕರ ನಾಯಕ ವಂದಿಸಿದರು.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















