ಅಡಿಕೆಗೆ ಮರಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಯಲ್ಲಾಪುರ ತಾಲೂಕಿನ ಮಾಳ್ಯಾನಕೊಪ್ಪದ ಶ್ರೀಶಂಭುಲಿಂಗೇಶ್ವರ ದೇವಾಲಯದಲ್ಲಿ ಮಾ.20 ಮತ್ತು 21 ರಂದು ದ್ವಾ ಸುಪರ್ಣಾ ಮಂತ್ರ ಹವನ, ಗಾಯತ್ರಿ ಹವನ, ಮಹಾಗಣಪತಿ ಹವನ, ಲಘುರುದ್ರ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ವರ್ಣವಲ್ಲೀ ಮಠದ ಉಭಯ ಶ್ರೀಗಳ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.

ಮಾ.20 ಶುಕ್ರವಾರ ಬೆಳಿಗ್ಗೆ ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ರುದ್ರ ಪಾರಾಯಣ, ಹೋಮಗಳು ನಡೆಯಲಿವೆ. ಮಾ.21ರಂದು ನಾನಾ ಹವನಗಳು, ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ವೈದಿಕರಿಂದ ಆಶೀರ್ವಾದ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading