ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಾವ ಶಾಲೆಯ ಫಲಿತಾಂಶ ಹೇಗಿದೆ? ವಿವರ ಇಲ್ಲಿದೆ.
ಗುರುವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ವಿವಿಧ ಪ್ರೌಢಶಾಲೆಗಳು ಉತ್ತಮ ಪ್ರಗತಿ ಸಾಧಿಸಿವೆ. ತಾಲೂಕಿನ ಶೇಕಡಾವಾರು ಫಲಿತಾಂಶ 98.26 ಆಗಿದೆ.
ತಾಲೂಕಿನ 23 ಪ್ರೌಢಶಾಲೆಗಳಲ್ಲಿ 17 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿವೆ. ಪಟ್ಟಣದ ಮೊರಾರ್ಜಿ ವಸತಿ ಶಾಲೆ, ವಾಯ್.ಟಿ.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ, ತಾಲೂಕಿನ ಮಲವಳ್ಳಿ ಸರ್ಕಾರಿ ಪ್ರೌಢಶಾಲೆ, ನಂದೊಳ್ಳಿ ಸರ್ಕಾರಿ ಪ್ರೌಢಶಾಲೆ, ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆ, ಹಿತ್ಲಳ್ಳಿ, ಹಂಸನಗದ್ದೆ, ಉಮ್ಮಚಗಿ ಪ್ರೌಢ ಶಾಲೆ
ಹಾಗೂ ಪ್ರಗತಿ ವಿದ್ಯಾಲಯ ಕುಂದರಗಿ,ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ, ಹೋಲಿ ರೋಜರಿ ಪ್ರೌಢ ಶಾಲೆ, ವಿಶ್ವದರ್ಶನ ಕನ್ನಡ ಮೀಡಿಯಂ ಯಲ್ಲಾಪುರ, ವಿಶ್ವದರ್ಶನ ಇಡಗುಂದಿ, ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿ, ಸ್ನೇಹಸಾಗರ ಇಡಗುಂದಿ, ಬಿಸಗೋಡ ಪ್ರೌಢಶಾಲೆ, ಮದರ್ ಥೆರೆಸಾ ಪ್ರೌಢ ಶಾಲೆ ಯಲ್ಲಾಪುರ, ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿವೆ.
ಹುಣಶೆಟ್ಟಿಕೊಪ್ಪ ಪ್ರೌಢಶಾಲೆ 90.9, ಕಿರವತ್ತಿ ಪ್ರೌಢಶಾಲೆ 92.47, ಕಿರವತ್ತಿ ಉರ್ದುಶಾಲೆ 93.33, ಯಲ್ಲಾಪುರ ಸರ್ಕಾರಿ ಪ್ರೌಢಶಾಲೆ 98.26, ವಯ.ಟಿ.ಎಸ್.ಎಸ್.ಪ್ರೌಢಶಾಲೆ 97.5 ಫಲಿತಾಂಶ ಪಡೆದಿವೆ.