ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಯಲ್ಲಾಪುರ ಪಟ್ಟಣದ ಪ್ರತಿಷ್ಠಿತ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈಬಾರಿಯ ಎಸ್.ಎಸ್.ಎಲ್.ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆ ಬರೆದ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.ನೂರರಷ್ಟು ಫಲಿತಾಂಶದೊಂದಿಗೆ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯು ಎ ಗ್ರೇಡ್ ಪಡೆದಿದೆ. ಈ ಶಾಲೆಯ 50 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು. 50 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳಾದ ನಾಗಶ್ರೀ ಶೇಟ್ 613(98.8), ಇಂಚರಾ ನಾಯ್ಕ 607(97.1), ಶ್ರಾವಣಿ ಆಚಾರಿ 594(95.0), ಶರೀನ್ ಶೇಖ್ 592(94.7), ಹುಮೈರಾ ಶೇಖ್ 591(94.5), ಪೀರದೋಶ ಶೇಖ್ 580(92.8), ಆಲಿಯಾ ಖಾನ್ 560(89.6), ಪ್ರತೀಕ್ಷಾ ಮಂಗಳಿ 556 (88.96), ಮಹ್ಮದ್ ದಾನಿಶ್ 550(88), ವಿನಯ ಭಾವಕರ 549(87.8), ಎಮ್.ಆರ್.ಶ್ರೀರಾಮ 537(85.9), ಅಭಿಷೇಕ ನಾಯ್ಕ 529(84.6), ಸೋನು ಕುರುಬರ್ 524 (83.8), ಅಧಿತಿ ಮುಗಲಕೋಡ 514 (82.24), ಸೌಮ್ಯಾ ಭಟ್ಟ 509(81.4), ಅನಫಲ ಶೇಖ್, 502(80.32), ರೂಹಾನ್ ಅಹ್ಮದ್ 499(79.84), ಸಮಾ ಫೀರಾ 499(79.84), ರಿಮೋನ ಸಮಾಂತಾ 473 (75.68), ಮಹ್ಮದ್ ಅಫಾನ 471( 73.36), ಅಂಕಿತಾ ಕನಮನ್ನುರ 469(75.04) ಅಂಕಗಳನ್ನು ಪಡೆದಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading