ಆಟೋರಿಕ್ಷಾವು ಲಾರಿ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಜೋಗಿಕೊಪ್ಪ ಕ್ರಾಸ್ ಸಮೀಪ ನಡೆದಿದೆ.

ಆರೋಪಿ ಆಟೋ ಚಾಲಕ ಮಹಮ್ಮದ ಗೌಸ್ ಕಮಲಸಾಬ ಕೋಳಿಕೇರಿ (70) ಎಂಬಾತ ತನ್ನ ಆಟೋದಲ್ಲಿ ಚೆನ್ನಬಸಪ್ಪ ಬುದ್ಧಿವಂತಪ್ಪ ನೆಲ್ಲಿಕೇರಿ ಹಾಗೂ ಥೋಮಸ್ ಜೋಸೆಫ್ ಕಲಘಟಗಿ ಎಂಬುವವರನ್ನು ಕೂರಿಸಿಕೊಂಡು, ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡುಹೋಗಿ, ಜೋಗಿಕೊಪ್ಪ ಕ್ರಾಸ್ ಹತ್ತಿರ ಲಾರಿಯ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ

ಆಟೋದಲ್ಲಿದ್ದ ಚೆನ್ನಬಸಪ್ಪ ಬುದ್ಧಿವಂತಪ್ಪ ನೆಲ್ಲಿಕೇರಿ ಹಾಗೂ ಥೋಮಸ್ ಜೋಸೆಫ್ ಕಲಘಟಗಿ ಅವರಿಗೆ ಗಾಯವಾಗಿದೆ. ಈ ಘಟನೆಯಲ್ಲಿ ಆಟೋ ಚಾಲಕ ಮಹಮ್ಮದ ಗೌಸ್ ಕಮಲಸಾಬ ಕೋಳಿಕೇರಿ ಅವರಿಗೂ ಗಾಯವಾಗಿದೆ. ಈ ಕುರಿತು ಲಾರಿ ಚಾಲಕ ಹುಬ್ಬಳ್ಳಿಯ ಶಿವರಾಜ ಕಲ್ಲಪ್ಪ ಮಡಿವಾಳರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading