ದೊಡ್ಡ ದೊಡ್ಡ ನಗರಗಳಂತೆ ಲಕ್ಷ, ಲಕ್ಷ ಶುಲ್ಕ ವ್ಯಯಿಸದೇ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತಿರುವ ಶಿರಸಿಯ ಚಂದನ ಪಿಯು ಕಾಲೇಜು ಆಸಕ್ತ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿರಲಿ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಚಂದನ ಕಾಲೇಜಿನಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.

ವಿದ್ಯಾರ್ಥಿಗಳು ತಮ್ಮ ಜೀವನದ ಮುಂದಿನ ಸಾಧನೆಗಾಗಿ ಎಸ್.ಎಸ್.ಎಲ್.ಸಿ.ನಂತರ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದೂ ಸಹ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಮಹತ್ವದ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಶಿರಸಿಯ ನಂ.1 ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಗೌಡಳ್ಳಿಯಲ್ಲಿರುವ ಚಂದನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.

ಇತ್ತೀಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಹಾಗೂ ಜೆಇಇ ಫಲಿತಾಂಶದಲ್ಲಿ ಚಂದನ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಪ್ರತಿ ತಿಂಗಳು ಐಐಟಿ ಅಧ್ಯಾಪಕರಿಂದ ವಿಶೇಷ ಕಾರ್ಯಾಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ಈ ಕಾಲೇಜಿನಲ್ಲಿ ಸಿಗುತ್ತಿದೆ.

ಚಂದನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಅಗತ್ಯ ಮತ್ತು ವಿಶೇಷ ಸೌಲಭ್ಯಗಳು ಇವೆ. ಉನ್ನತ ಶಿಕ್ಷಣಾರ್ಹತೆಯ ಅನುಭವಿ ಮತ್ತು ಪ್ರಖ್ಯಾತ ಅಧ್ಯಾಪಕರುಗಳ ತಂಡ ಈ ಕಾಲೇಜಿನಲ್ಲಿದೆ. ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಹಾಗೂ ಸುರಕ್ಷಿತವಾದ ಹಾಸ್ಟೆಲ್, ಶಾಖಾಹಾರದ ಊಟದ ವ್ಯವಸ್ಥೆ, ನಿರಂತರ ಮಾಸಿಕ ಪರೀಕ್ಷೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರ,

ಅಸೈನ್ ಮೆಂಟ್ ತರಗತಿಗಳು, ಸ್ಮಾರ್ಟ್ ಬೋರ್ಡ್ ಮೂಲಕ ನಿರಂತರ ಪಾಠ, ಕರಿಯರ್ ಗೈಡೆನ್ಸ್ ತರಗತಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ವಿದ್ಯಾರ್ಥಿಗಳಿಗೆ ಕಾಲೇಜು ಬಸ್ ಸೌಲಭ್ಯ, ಆಡಿಯೋ ವಿಶ್ಯುವಲ್ ಕ್ಲಾಸ್, ಸುಸಜ್ಜಿತ ಪ್ರಯೋಗಾಲಯ, ಆಡಿಟೋರಿಯಂ, ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದ ಹಲವು ಸೌಲಭ್ಯಗಳು ಚಂದನ ಕಾಲೇಜಿನಲ್ಲಿ ಇವೆ. ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡಲಾಗುತ್ತಿದೆ.

ಇತ್ತೀಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಚಂದನ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಜೆಇಇ ಪರೀಕ್ಷೆಯಲ್ಲಿ ಈ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ.

ವಿಜ್ಞಾನ :
ಭೌತಶಾಸ್ತ್ರ/ ರಸಾಯನಶಾಸ್ತ್ರ /ಗಣಿತ /ಜೀವಶಾಸ್ತ್ರ
ಭೌತಶಾಸ್ತ್ರ/ ರಸಾಯನಶಾಸ್ತ್ರ /ಗಣಿತ ಕಂಪ್ಯೂಟರ್ ವಿಜ್ಞಾನ.

ಅರ್ಥಶಾಸ್ತ್ರ ಬಿಸಿನೆಸ್ ಸ್ಟಡೀಸ್, ಅಕೌಂಟನ್ಸಿ, ಸ್ಟ್ಯಾಟಿಸ್ಟಿಕ್ಸ್

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading