ಯಲ್ಲಾಪುರ ತಾಲೂಕಿನ ಮಾದರಿ ಹಾಲು ಉತ್ಪಾದಕರ ಸಹಕಾರಿ ಸಂಘ ಎಂದೇ ಹೆಸರಾದ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ 33ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಆನಗೋಡಿನ ಸಂಘದ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ 2,17,705 ಲೀ ಹಾಲು ಸಂಗ್ರಹಿಸಿದೆ. ಇವುಗಳಲ್ಲಿ ಒಕ್ಕೂಟಕ್ಕೆ 2,13,682 ಲೀಟರ್ ಹಾಗೂ ಸ್ಥಳೀಯವಾಗಿ 16,201 ಲೀಟರ್ ಹಾಲು ಮಾರಾಟವಾಗಿದೆ. ವರದಿಯ ವಷ೯ದಲ್ಲಿ 975 ಚೀಲ ಒಕ್ಕೂಟದ ಪಶು ಆಹಾರ ಹಾಗೂ 480 ಕೆ,ಜಿ ಖನಿಜ ಮಿಶ್ರಣ ಮಾರಾಟ ಮಾಡಲಾಗಿದೆ.

ಸಂಘಕ್ಕೆ 3,31,435 ರೂ ನಿವ್ವಳ ಲಾಭವಾಗಿದ್ದು. ಈ ಲಾಭದಲ್ಲಿ 2,00,000 ರೂ ಹಣವನ್ನು ಸದಸ್ಯರಿಗೆ ಪ್ರೊತ್ಸಾಹ ಧನವಾಗಿ ನೀಡಲಾಗಿದೆ ಎಂದರು. ಸಂಘವು ಸಾಧಿಸಿದ ಪ್ರಗತಿಗೆ ಸದಸ್ಯರ ವಿಶ್ವಾಸಪೂರ್ಣ ಸಹಕಾರವೆ ಕಾರಣ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಶು ವೈದ್ಯ ಡಾ.ಸುಬ್ರಾಯ ಭಟ್ಟ ಮಾತನಾಡಿ, ಪಶು ಸಂಗೊಪನೆ ಬಗ್ಗೆ ಸದಸ್ಯರಿಗೆ ಅನೇಕ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿ.ಎನ್.ಭಟ್ ಕಾರೆಮನೆ ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು ಇದ್ದರು. ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ವಿಶ್ವೇಶ್ವರ ಹೆಗಡೆ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕರಾದ ಮಂಜುನಾಥ ಭಟ್ ದವಣ್ಣಮನೆ ಸ್ವಾಗತಿಸಿ, ವಂದಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading