ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘಕ್ಕೆ 39 ಲಕ್ಷ ರೂ ಲಾಭ : ಜಿ.ಎನ್.ಹೆಗಡೆ ಹಿರೇಸರ
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 39,02,056 ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.
ಅವರು ಮಂಗಳವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘವು 22ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎಲ್ಲರ ಸಹಕಾರದಿಂದ ಸಂಘವು ಉತ್ತಮ ಪ್ರಗತಿ ಸಾಧಿಸಿದೆ. ಸಂಘದಲ್ಲಿ 6191 ಸದಸ್ಯರಿದ್ದು, ಸಂಘದ ಎಲ್ಲಾ ಶಾಖೆಗಳಲ್ಲಿ ಇ-ಸ್ಟಾಂಪಿಂಗ್, ಗುಂಪು ವಿಮಾ ಯೋಜನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸದಸ್ಯರ ಮಕ್ಕಳಿಗೆ ವಿದ್ಯಾಪ್ರೋತ್ಸಾಹಧನ ವಿತರಣೆ, ಕ್ಯಾನ್ಸರ್ ಪೀಡಿತ ಸದಸ್ಯರಿಗೆ ಅನುಕಂಪ ಪರಿಹಾರ ವಿತರಣೆ ಮುಂತಾದವುಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಉಮ್ಮಚಗಿ ಮತ್ತು ಶಿರಸಿಯಲ್ಲಿ ಅಡಿಕೆ ಖರೀದಿ ಮತ್ತು ವಿಕ್ರಿ ವ್ಯವಹಾರ ಕೈಗೊಳ್ಳಲಾಗಿದೆ. ಸಂಘದ ನಾಲ್ಕೂ ಶಾಖೆಗಳು ಲಾಭದಲ್ಲಿ ಮುನ್ನೆಡೆದಿವೆ ಎಂದು ಮಾಹಿತಿ ನೀಡಿದರು.
ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.20ರಂದು ಉಮ್ಮಚಗಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಉತ್ತಮ ಗ್ರಾಹಕರಿಗೆ ಸನ್ಮಾನ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಅನುಕಂಪ ಪರಿಹಾರ ವಿತರಣೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ : ಜಿ.ಎನ್.ಹೆಗಡೆ ಹಿರೇಸರ
ಸಂಘದ ಉಪಾಧ್ಯಕ್ಷ ಎಸ್.ಎಸ್.ಭಟ್ಟ ಮಾತನಾಡಿ, ಸಹಕಾರ ರತ್ನ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತರಾದನಮ್ಮ ಸಂಘದ ಅಧ್ಯಕ್ಷರಾದ ಜಿ.ಎನ್.ಹೆಗಡೆಯವರನ್ನು ವಾರ್ಷಿಕ ಸಭೆಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಸರ, ಆರ್.ಎಲ್.ಭಟ್ಟ, ಕೆ.ಎಸ್.ಭಟ್ಟ, ಆರ್.ಡಿ.ಹೆಬ್ಬಾರ್, ಮಂಜುನಾಥ ಗುಮ್ಮಾನಿ, ಶಕುಂತಲಾ ಹೆಗಡೆ, ಸಲಹೆಗಾರರಾದ ಜಿ.ಕೆ.ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಗೋಪಾಲಕೃಷ್ಣ ಹೆಗಡೆ, ಶಾಖಾ ವ್ಯವಸ್ಥಾಪಕ ನೇತ್ರಾನಂದ ಮರಾಠಿ ಮುಂತಾದವರು ಇದ್ದರು.