









2-10-2025 ಗುರುವಾರ ಯಲ್ಲಾಪುರ
ಸಂಘವೆಂದರೆ ಜನ ಶಕ್ತಿ, ಸಂಘವೆಂದರೆ ದೇಶ ಭಕ್ತಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಗುರುವಾರ ತಮ್ಮ ಅಭಿಪ್ರಾಯವನ್ನು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ.

ರಾಮು ನಾಯ್ಕ
ಕೇಂಬ್ರಿಡ್ಜ್, ಹಾರ್ವರ್ಡ್, ಆಕ್ಸ್‍ಫರ್ಡ್, ಐಐಎಂ, ಐಐಟಿ, ಬಿಐಟಿ ಮತ್ತು ಎನ್.ಐ.ಟಿ. ಮುಂತಾದ ಪ್ರಖ್ಯಾತ ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು ಸೇರಿದಂತೆ ಇಡೀ ಜಗತ್ತು ಆರ್.ಎಸ್.ಎಸ್. ಶಾಖೆಗಳ ನಿಯೋಜನೆ, ಚಟುವಟಿಕೆ ನೋಡಿ ಆಶ್ಚರ್ಯ ಚಕಿತವಾಗಿವೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಮಂತ್ರಿ, ರಕ್ಷಣಾ ಮಂತ್ರಿ, ಲೋಕಸಭೆಯ ಸ್ಪೀಕರ್, 18 ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, 29 ರಾಜ್ಯಗಳ ರಾಜ್ಯಪಾಲರು, 283 ಲೋಕಸಭಾ ಸದಸ್ಯರು, 58 ರಾಜ್ಯಸಭಾ ಸದಸ್ಯರು, 1460 ಶಾಸಕರುಗಳು,
ಇವರನ್ನು ಒಳಗೊಂಡ 90 ಸಾವಿರಕ್ಕೂ ಹೆಚ್ಚು ಶಾಖೆಗಳು,1 ಕೋಟಿಗೂ ಹೆಚ್ಚು ಸ್ವಯಂಸೇವಕರು, 2 ಲಕ್ಷ ಸರಸ್ವತಿ ವಿದ್ಯಾ ಮಂದಿರಗಳು, 5 ಲಕ್ಷ ಶಿಕ್ಷಕರು, 1 ಕೋಟಿ ವಿದ್ಯಾರ್ಥಿಗಳು, 1 ಕೋಟಿ ಎಬಿವಿಪಿ ಕಾರ್ಯಕರ್ತರು, 13 ಕೋಟಿ ಬಿಜೆಪಿ ಸದಸ್ಯರು, 9 ಸಾವಿರ ಪೂರ್ಣಾವಧಿ ಕಾರ್ಯಕರ್ತರು, 7 ಲಕ್ಷ ಮಾಜಿ ಸೈನಿಕರ ಮಂಡಳಿಯ ಸದಸ್ಯರು, 2 ಕೋಟಿ ಬಿ.ಎಂ.ಎಸ್. ಸದಸ್ಯರು, ವಿಶ್ವದಾದ್ಯಂತ 1 ಕೋಟಿ ವಿ.ಹಿಂ.ಪ. ಸದಸ್ಯರು, 30 ಲಕ್ಷ ಬಜರಂಗದಳ ಕಾರ್ಯಕರ್ತರು, 1200 ಪ್ರಕಾಶನ ಸಂಸ್ಥೆಗಳು, 1.50 ಲಕ್ಷ ಸೇವಾ ಯೋಜನೆಗಳು, ಇವುಗಳಿಂದ ಸುತ್ತುವರೆದ,
ವನವಾಸಿ ಕಲ್ಯಾಣ ಆಶ್ರಮ, ವನಬಂಧು ಪರಿಷತ್, ಸಂಸ್ಕಾರ ಭಾರತಿ, ವಿಜ್ಞಾನ ಭಾರತಿ, ಲಘು ಉದ್ಯೋಗ ಭಾರತಿ, ಸೇವಾ ಸಹಕಾರ್, ಸೇವಾ ಇಂಟನ್ರ್ಯಾಶನಲ್, ರಾಷ್ಟ್ರೀಯ ಸೇವಿಕಾ ಸಮಿತಿ, ಆರೋಗ್ಯ ಭಾರತಿ, ದುರ್ಗಾ ವಾಹಿನಿ, ಸಾಮಾಜಿಕ ಸಾಮರಸ್ಯ ಮಂಚ್, ಸಂಘಟಕ, ಪಾಂಚಜನ್ಯ, ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಟ್ರಸ್ಟ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತೀಯ ವಿಚಾರ ಸಾಧನಾ, ಸಂಸ್ಕøತ ಭಾರತಿ, ಭಾರತ ವಿಕಾಸ ಪರಿಷತ್, ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸರ್ಕಲ್, ದೃಷ್ಟಿ ಸಂಸ್ಥಾನ, ಹಿಂದೂ ಸಹಾಯವಾಣಿ, ಹಿಂದೂ ಸ್ವಯಂಸೇವಕ ಸಂಘ, ಹಿಂದೂ ಮುನ್ನಾನಿ, ಅಖಿಲ ಭಾರತ ಸಾಹಿತ್ಯ ಪರಿಷತ್, ಭಾರತೀಯ ಕಿಸಾನ್ ಸಂಘ, ವಿವೇಕಾನಂದ ಕೇಂದ್ರ,
ತರುಣ್ ಭಾರತ್, ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್, ಹಿಂದೂಸ್ತಾನ್ ಸಮಾಚಾರ, ವಿಶ್ವ ಸಂವಾದ ಕೇಂದ್ರ, ಜನಕಲ್ಯಾಣ ಬ್ಲಡ್ ಬ್ಯಾಂಕ್, ಇತಿಹಾಸ ಸಂಕಲನ ಸಮಿತಿ, ರಾಷ್ಟ್ರ ಸೇವಿಕಾ ಸಮಿತಿ, ಸ್ತ್ರೀ ಶಕ್ತಿ ಜಾಗರಣ, ಏಕಲ್ ವಿದ್ಯಾಲಯ, ಧರ್ಮ ಜಾಗರಣ್, ಭಾರತ ಭಾರತಿ, ಸಾವರ್ಕರ್ ಅಧ್ಯಾಸನ್, ಶಿವಾಜಿ ಅಧ್ಯಯನ, ಪತಿತ್ ಪಾವನ್ ಸಂಘಟನೆ, ಹಿಂದೂ ಏಕತಾ ಇತ್ಯಾದಿ,ಇತ್ಯಾದಿ ಇನ್ನೂ ಹಲವಾರು ಸಂಸ್ಥೆಗಳಲ್ಲಿ ಹಾಸು ಹೊಕ್ಕಾಗಿದೆ ಸಂಘ.
ಸಂಘವೆಂದರೆ ಜನ ಶಕ್ತಿ. ಸಂಘವೆಂದರೆ ದೇಶ ಭಕ್ತಿ. ಸಂಘವೆಂದರೆ ಧರ್ಮ ನಿಷ್ಠೆ. ಸಂಘವೆಂದರೆ ನಿಸ್ವಾರ್ಥ ಸೇವೆ. ಅದುಮಿದಷ್ಟು ಪುಟಿದೇಳುವ ಸಂಘಟನೆ ಇಂದು ನೂರನೇ ವಿಜಯದಶಮಿಯನ್ನು ಕಾಣುತ್ತಿದೆ. ಶತಕದ ಸಂಭ್ರಮದಲ್ಲಿದೆ. ಧ್ಯೇಯ ನಿಷ್ಠರು ಕೈ ಜೋಡಿಸುತ್ತಿದ್ದಾರೆ. ದೇಶಭೃಷ್ಟರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಕೇವಲ ನೂರು ವರ್ಷದಲ್ಲಿ ಇಷ್ಟು ಸಾಧನೆ!!. ಇನ್ನೂ ನೂರು ವರ್ಷ ಕಳೆದರೆ!!!. ದೇಶವನ್ನು ಕೊಳ್ಳೆ ಹೊಡೆಯಲು ಬಂದವರ ಮೈ ಬೆವರಲು ಆರಂಭವಾಗಿದೆ. ಹಿಂದೆಯೂ ಅನೇಕರು ಸಂಘ ನಾಶದ ಕನಸು ಕಂಡಿದ್ದರು. ಆದರೆ ಕಾಲಗರ್ಭದಲ್ಲಿ ಅವರೇ ನಾಶವಾದರು. ಈಗಲೂ ಕೆಲವರು ಮತ್ತದೇ ಕನಸು ಕಾಣುತ್ತಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕಾಲವೇನು ಸುಮ್ಮನೆ ಕುಳಿತಿಲ್ಲ. ಕಾಲವೂ ಅವಕಾಶಕ್ಕಾಗಿ ಕಾಯುತ್ತಿದೆ, ಇತಿಹಾಸದ ಪುನರಾವರ್ತನೆಗಾಗಿ ಎಂದಿದ್ದಾರೆ ರಾಮು ನಾಯ್ಕ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















