ಅ.11 ಶನಿವಾರ ಬೆಳಿಗ್ಗೆ 10.30 ಗಂಟೆಗೆ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಶ್ರೀಕೃಷ್ಣಾರ್ಪಣಂ ಸಮಾರಂಭ ನಡೆಯಲಿದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರಿಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀಕೃಷ್ಣಾರ್ಪಣಂ ಸಮಾರಂಭ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.

ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕಿ, ಜೀ ಸರಿಗಮಪ, ಸೋನಿ ಸೂಪರ್ ಸ್ಟಾರ್ ಸಿಂಗರ್ ದಿಯಾ ಹೆಗಡೆ , ಖ್ಯಾತ ಜ್ಯೋತಿಷಿ ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಗೌತಮ್ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಡಿಸಿಎಫ್ ಹರ್ಷಭಾನು, ಯಲ್ಲಾಪುರ ಪಟ್ಟಣ ಪಂಚಾಯತಿ ಅಧ್ಯಕ್ಷೆ ನರ್ಮದಾ ನಾಯ್ಕ,

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ, ಶಿವಲಿಂಗಯ್ಯ ಅಲ್ಲಯ್ಯನವರಮಠ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಡಿ.ಜನಾರ್ಧನ, ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್, ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕಾರ್, ತಾಲೂಕಾ ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಉದ್ಯಮಿ ಮಂಜುನಾಥ ಜನ್ನು ಗೋಕರ್ಣ ಪಾಲ್ಗೊಳ್ಳಲಿದ್ದಾರೆ.

ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಹಿರಿಯ ಸಹಕಾರಿಳು, ಜಿ.ಎನ್.ಹೆಗಡೆ ಹಿರೇಸರ ಅಧ್ಯಕ್ಷರು, ಶ್ರೀಮಾತಾ ಸೊಸೈಟಿ ಉಮ್ಮಚಗಿ, ಮುರಳಿ ಹೆಗಡೆ ಅಧ್ಯಕ್ಷರು ವಿಕಾಸ್ ಬ್ಯಾಂಕ್ ಯಲ್ಲಾಪುರ, ನಂದನ ಬಾಳಗಿ ಉದ್ಯಮಿಗಳು, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷರು, ಮಲೆನಾಡು ಸೊಸೈಟಿ, ಎಂ.ಜಿ.ಭಟ್ಟ ಸಂಕದಗುಂಡಿ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಉಮ್ಮಚಗಿ,

ವಿಶ್ವನಾಥ ಭಟ್ ಎಂ.ಕೆ.ಬಿ. ಪರಿವಾರ, ಸುಪ್ರೀತ್ ಭಟ್ ಚಂದಗುಳಿ ಸಿದ್ಧಿವಿನಾಯಕ ಟ್ರೇಡರ್ಸ್, ಆರ್.ಎನ್.ಹೆಗಡೆ ಗೋರ್ಸಗದ್ದೆ ಅಧ್ಯಕ್ಷರು, ಹಾಸಣಗಿ ಸೊಸೈಟಿ, ನಾರಾಯಣ ಭಟ್ ಬಟ್ಲಗುಂಡಿ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಇಡಗುಂದಿ,

ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಕಾರ್ಯದರ್ಶಿ ಸುಜ್ಞಾನ ಸೇವಾ ಸಂಸ್ಥೆ, ಅಬ್ದುಲ್ ಖಾದರ್ ಶೇಖ್ ಮಾಲೀಕರು ಶಮಾ ಭಾರತ ಗ್ಯಾಸ್, ಪ್ರಶಾಂತ ಶರ್ಮ ವಂದನಾ ಮೆಗಾ ಮಾರ್ಟ್ ಯಲ್ಲಾಪುರ, ಉಮೇಶ ಭಾಗ್ವತ್ ಅಧ್ಯಕ್ಷರು, ಸಹ್ಯಾದ್ರಿ ಸೇವಾ ಸಂಘ ಯಲ್ಲಾಪುರ, ನಾಗರಾಜ ಕೌಡಿಕೆರೆ ಅಧ್ಯಕ್ಷರು ಎಲ್.ಎಸ್.ಎಂ.ಪಿ.ಸೊಸೈಟಿ, ಸುಬ್ರಾಯ ಭಟ್ ಬೋಳ್ಮನೆ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಮಾವಿನಮನೆ,

ಪೂಜಾ ಶೇಟ್ ಅಧ್ಯಕ್ಷರು ಜ್ಞಾನೇಶ್ವರಿ ಮಹಿಳಾ ಮಂಡಳ ಟ್ರಸ್ಟ್, ಗೋಪಾಲಕೃಷ್ಣ ಗಾಂವ್ಕಾರ್ ಅಡಿಕೆ ವ್ಯಾಪಾರಸ್ಥರು, ಯಲ್ಲಾಪುರ, ವಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷರು ಕ.ಸಾ.ಪ. ಯಲ್ಲಾಪುರ, ಸಿ.ಎ.ವಿಘ್ನೇಶ್ವರ ಗಾಂವ್ಕರ್ ಲೆಕ್ಕಪರಿಶೋಧಕರು ಯಲ್ಲಾಪುರ, ಗಣೇಶ ಪತ್ತಾರ್ ಮಾಲೀಕರು, ಪತ್ತಾರ್ ಸ್ಟುಡಿಯೋ, ವಿದುಷಿ ವಿನುತಾ ರಾಘವೇಂದ್ರ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಭಾಗವಹಿಸಲಿದ್ದಾರೆ.

ಈ ಸಮಾರಂಭಕ್ಕೆ ನೀವೂ ಬನ್ನಿ…. ನಿಮ್ಮವರೊಂದಿಗೆ ಬನ್ನಿ!!

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading