ಶ್ರೀಕೃಷ್ಣಾರ್ಪಣಂ ಸಮಾರಂಭದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ್
ಸುಜ್ಞಾನ ಸೇವಾ ಸಂಸ್ಥೆ(ರಿ) ಉತ್ತರಕನ್ನಡ ಹಾಗೂ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮತ್ತು ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ, ಗೌತಮ ಜುವೆಲ್ಲರ್ಸ್ ಯಲ್ಲಾಪುರ ಹಾಗೂ ಹ್ಯಾಂಗ್ಯೋ ಐಸ್ ಕ್ರೀಂ ಸಹಯೋಗದಲ್ಲಿ, ಜ್ಞಾನೇಶ್ವರಿ ಮಹಿಳಾ ಮಂಡಳಿ ಮತ್ತು ರಂಗ ಸಹ್ಯಾದ್ರಿ ಸಹಕಾರದೊಂದಿಗೆ ಐದನೇ ವರ್ಷದ ಶ್ರೀಕೃಷ್ಣಾರ್ಪಣಂ ಸಮಾರಂಭವು ಅ.11 ಶನಿವಾರ ಬೆಳಿಗ್ಗೆ 10.30 ಗಂಟೆಗೆ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಸಾಧಕರಿಗೆ ಪ್ರತಿಷ್ಠಿತ ಸುಜ್ಞಾನ ಸಮ್ಮಾನ್ ಪ್ರಶಸ್ತಿ ಪ್ರದಾನ, ಶ್ರೀಕೃಷ್ಣ ನೃತ್ಯಾಮೃತ, ಶ್ರೀಕೃಷ್ಣ ಗಾನಾಮೃತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸಮಾರಂಭದ ವಿಶೇಷ ಪೋಸ್ಟರ್ ಅನ್ನು ಯಲ್ಲಾಪುರದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಿಡುಗಡೆಗೊಳಿಸಿ ಮಾತನಾಡಿ ಸಮಾರಂಭವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ, ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ಮುಂತಾದವರು ಇದ್ದರು.
ಶ್ರಿಕೃಷ್ಣಾರ್ಪಣಂ ಸಮಾರಂಭಕ್ಕೆ ದಿಯಾ ಹೆಗಡೆ
ಖ್ಯಾತ ಗಾಯಕಿ, ಜೀ ಕನ್ನಡ ಸರಿಗಮಪ, ಸೋನಿ ಸೂಪರ್ ಸ್ಟಾರ್ ಸಿಂಗರ್ ದಿಯಾ ಹೆಗಡೆ ಶ್ರಿಕೃಷ್ಣಾರ್ಪಣಂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.