13-10-2025 ಸೋಮವಾರ ಯಲ್ಲಾಪುರ

ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷತನದ್ದು : ರಾಮು ನಾಯ್ಕ

ಪ್ರಚಾರ ಪ್ರಿಯ ಪ್ರಿಯಾಂಕ್ ಖರ್ಗೆ, ಮುಂದಿನ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ ಹತಾಶರಾಗಿದ್ದಾರೆ. ಹೊಸ ಪ್ರಚಾರ ಆರಂಭಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸುವ ಅವರ ಹೇಳಿಕೆ ಬಾಲಿಶತನದ್ದು ಎಂದು ಬಿಜೆಪಿ ಮುಖಂಡ, ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು,

ಕಳೆದ ನೂರು ವರ್ಷಗಳಲ್ಲಿ ಮೂರು ಮೂರು ತಲೆಮಾರುಗಳು ಕಳೆದುಹೋದವು. ಇವರ ರಾಜಕೀಯ ನೇತಾರರಾದ ರಾಜೀವ ಗಾಂಧಿ, ಅವರಮ್ಮ ಇಂದಿರಾ ಗಾಂಧಿ, ಅವರಪ್ಪ ಜವಾಹರಲಾಲ ನೆಹರು ಯಾರಿಂದಲೂ ಸಂಘವನ್ನು ಬಗ್ಗಿಸಲು ಆಗಲಿಲ್ಲ. ಬೆಳೆಯುತ್ತಲೇ ಇದೆ. ಇನ್ನೂ ಬೆಳೆಯುತ್ತಲೇ ಇದೆ. ಕಳೆದ ನೂರು ವರ್ಷಗಳಲ್ಲಿ ಸಂಘ ರಾಷ್ಟ್ರವ್ಯಾಪಿ ಹೆಮ್ಮರವಾಗಿ ಬೆಳೆದಿದೆ. ಈಗ ಬಗ್ಗಿಸುವ ಅಸಾಧ್ಯ, ಅದು ಖರ್ಗೆಗೂ ಗೊತ್ತು. ಆದರೆ, ತಾನು ಸಂಘವನ್ನು ಇಷ್ಟು ಬಹಿರಂಗವಾಗಿ ಟೀಕಿಸಿದ ಕಾರಣಕ್ಕಾಗಿಯಾದರೂ ರಾಹುಲ ಗಾಂಧಿ ಪ್ರಸನ್ನರಾಗಿ, ತಮ್ಮ ಸಚಿವ ಸ್ಥಾನ ಅಬಾಧಿತವಾಗಿ ಉಳಿಯಬಹುದೇ? ಪ್ರಿಯಾಂಕ ಖರ್ಗೆ ದೂರದ ಲೆಕ್ಕಾಚಾರದಲ್ಲಿದ್ದಾರೆ ಎಂದಿದ್ದಾರೆ ರಾಮು ನಾಯ್ಕ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading