ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಅಕ್ರಮವಾಗಿ ಬೆಳಗಾವಿ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಬುಲೆರೋ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ವೇಳೆ ಯಲ್ಲಾಪುರ ಪಟ್ಟಣದಲ್ಲಿ ಪೋಲೀಸರು ದಾಳಿನಡೆಸಿ, ಜಾನುವಾರುಗಳನ್ನು ರಕ್ಷಿಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಭಟ್ಕಳದ ರಬ್ಬಾನಿ ಕಚವಿ, ಅಲ್ತಾಫ್ ಎಂಬುವವರು ಭಟ್ಕಳದ ಮಹಮ್ಮದ್ ಸಿದ್ದಿಕ್ ಎಂಬುವವರ ಬುಲೆರೋ ವಾಹನದಲ್ಲಿ ಒಂದು ಆಕಳು, ಎರಡು ಹೋರಿ, ಮೂರು ಸಣ್ಣ ದನಗಳನ್ನು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಸಾಗಿಸುತ್ತಿರುವಾಗ ಯಲ್ಲಾಪುರ ಪಟ್ಟಣದಲ್ಲಿ ಪೊಲೀಸರು ದಾಳಿ ನಡೆಸಿ, ಜಾನುವಾರುಗಳನ್ನು ರಕ್ಷಿಸಿದ್ದು, ಬುಲೆರೋವನ್ನು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳು ವಾಹನ ಬಿಟ್ಟು ಓಡಿಹೋಗಿದ್ದಾರೆ.
ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading