ದಿನೇ,ದಿನೇ ಬೆಳೆಯುತ್ತಿರುವ ಸಂಘಟನೆಯಾದ ಜಯ ಭಾರತ ಸಂಘಟನೆಯ ಸಭೆಯು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮ ವ್ಯಾಪ್ತಿಯ ಅಲಕೇರಿ ಗೌಳಿವಾಡದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಯ ಭಾರತ ಸಂಘಟನೆಯ ಸ್ಥಳೀಯ ಸಮೀತಿಯನ್ನು ರಚಿಸಲಾಯಿತು.

ಜಯ ಭಾರತ ಸಂಘಟನೆಯ ಅಧ್ಯಕ್ಷರಾದ ವಿಜಯ ಮಿರಾಶಿಯವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ರೆಹಮತ್ ಅಬ್ಬಿಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘಟನೆಯ ಬಗ್ಗೆ ಜನರಲ್ಲಿ ಮನ ಮುಟ್ಟುವ ರೀತಿಯಲ್ಲಿ ಸರಳವಾಗಿ ವಿವರಿಸಿದರು.

ಅಲಕೇರಿ ಗೌಳಿವಾಡ ಯುವ ಜಯ ಭಾರತ ಸಂಘಟನೆಯ ಅಧ್ಯಕ್ಷ ದಾಕ್ಲು ಜಾನಕರ ಉಪಾಧ್ಯಕ್ಷ ದೀಪಕ ಮಲಗೊಂಡೆ ಹಾಗೂ ಸಂಘಟನೆಯ ಸದಸ್ಯರನ್ನು ನೇಮಕ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಂಘಟನೆಯ ಕಾರ್ಯದರ್ಶಿ ಮುಸ್ತಾಕ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಶಿದ ಬಂಕಾಪುರ ಸಾಮಾಜಿಕ ಕಾರ್ಯಕರ್ತ ಕಲ್ಲಪ್ಪ ಹರಿಜನ, ಮುಖಂಡರಾದ ರುದ್ರಪ್ಪಾ ವಾಲ್ಮೀಕಿ ಅಲಕೇರಿ ಗೌಳಿವಾಡದ ಹಿರಿಯರಾದ ದೊಂಡು ಬಾಜಾರಿ, ಬಾಬು ಜಾನಕರ, ಬಾಬು ಮಲಗೊಂಡೆ ಹಾಗೂ ಜಯ ಭಾರತ ಸಂಘಟನೆಯ ಯುವಕರು, ಮಹಿಳೆಯರು ಊರಿನ ಹಿರಿಯರು ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading