ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿಯಾದ ಪರಿಣಾಮ 30 ಪ್ರಯಾಣಿಕರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ.

ಎಸ್.ಅರ್.ಎಸ್.ಬಸ್ಸಿನ ಚಾಲಕ ಆರೋಪಿ ಅಶೋಕ ಶಂಕರಪ್ಪ ಗೌಂಡಿ ಎಂಬಾತ ರವಿವಾರ ಬೆಳಿಗ್ಗೆ ಬಸ್ಸನ್ನು ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು ಬಸ್ಸಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ಸು ರಸ್ತೆ ಪಕ್ಕದ ಮರಕ್ಕೆ ಢಿಕ್ಕಿಯಾಗಿದೆ. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 30 ಜನರಲ್ಲಿ ಕೆಲವರಿಗೆ ಗಂಭಿರ ಗಾಯ ಹಾಗೂ ಇನ್ನೂ ಕೆಲವರಿಗೆ ಸಾದಾ ಗಾಯವಾಗಿದೆ.

ರಜನಿ ರೇವಣಕರ್ ಬೆಂಗಳೂರು, ಸನಾರ್ಜುನ ವಡ್ಡಿನಕಟ್ಟೆ ಧಾರವಾಡ, ರವೀಶ ತಿಮ್ಮಣ್ಣ ಭಾಗ್ವತ್ ಇಡಗುಂದಿ, ಪೂಜ ಪೆಡ್ನೇಕರ್ ಕಾರವಾರ, ಹರಿಶ್ಚಂದ್ರ ಸಾಹು ಓಡಿಸಾ, ಪ್ರಭುರಾಮ ಸಾಹು ಓಡಿಸಾ, ಅಮೀತಾ ಖಾರ್ವಿ ಭಟ್ಕಳ,

ಸೆಲೆಸ್ಟಿಯಾ ಮಾರ್ಟಲಿನ್ ಬೆಂಗಳೂರು, ಅಪೂರ್ವಾ ದೇಸಾಯಿ ಬೆಂಗಳೂರು, ಸುಮಿತ್ರಾ ಬಿಸ್ವಾಸ್ ಪಣಜಿ, ನಾಝೀಮಾಭಾನು ಬೆಂಗಳೂರು, ಚಿಕಿತಾ ಲೆಮಾನ್ಸ್ ಮಾಸ್ಕೋ, ಸೋಹೇಬ್ ಉಮರ್ ಕೇರಳಾ, ಅಭಿಜಿತ್ ನಾಯ್ಕ ಗೋವಾ, ಬಿಲಾಲ್ ಅಬ್ದುಲ್ ಕೇರಳ, ಶಿವಕುಮರ್ ಹೌಜಿ ಬಿಜಾಪುರ,

ವೀರಪ್ಪ ಹೊಸಮನಿ ಕಲಾಯಿ, ಅಮೂಲ್ಯಾ ಗುಡವೇಕರ್ ಕಾರವಾರ, ಯಶ್ ನಾಯ್ಕ ಕಾಣಕೋಣ, ಗೌರೀಶ ನಾಯ್ಕ ಕಾರವಾರ, ರಘುರಾಮ ಸಾಹು ಓಡಿಸಾ, ಲಕ್ಷ್ಮೀಕಾಂತ ಕಾಪಡಸ್ಕರ್ ಕಾರವಾರ, ಮಾಬೂಬ್ ಅತ್ತಾರ್ ದೇವಿಕೊಪ್ಪ, ಗೌರೀಶ್ ನಾಯ್ಕ ಕಾರವಾರ ಹಾಗೂ ಬಸ್ಸಿನ ಚಾಲಕ ಅಶೋಕ ಗೌಂಡಿ ಮತ್ತು ಇನ್ನೂ ಐವರು ಗಾಯಗೊಂಡಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಸ್ಸು ಬೆಂಗಳೂರಿನಿಂದ ಗೋವಾಕ್ಕೆ ಹೋಗುತ್ತಿತ್ತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading