ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನಲ್ಲಿ ಪಲ್ಟಿಯಾಗುತ್ತಿದ್ದ ಸಂದರ್ಭದಲ್ಲಿ, ಜೀವ ಉಳಿಸಿಕೊಳ್ಳಲು ಲಾರಿಯಿಂದ ರಸ್ತೆಗೆ ಹಾರಿದ ಚಾಲಕನು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಲಾರಿ ಚಾಲಕ ಬಿಹರ ರಾಜ್ಯದ ಬೃಂದಾವನ ನಿವಾಸಿ ಮುಖೇಶ ಕುಮಾರ್ ಎಂಬಾತ ತನ್ನ ಲಾರಿಯನ್ನು ಅತೀ ವೇಗವಾಗಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ, ಅರಬೈಲ್ ಘಟ್ಟದ ಶೀರ್ಲೆ ಪಾಲ್ಸ್ ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಹೆದ್ದಾರಿ ಅಂಚಿಗೆ ಪಲ್ಟಿಯಾಗಿದೆ.

ಲಾರಿ ಪಲ್ಟಿ ಯಾಗುತ್ತಿರುವ ಸಂದರ್ಭದಲ್ಲಿ ಚಾಲಕ ಮುಖೇಶ ಕುಮಾರ್ ಲಾರಿಯಿಂದ ಹೊರಗೆ ಹಾರಿದಾಗ, ತಲೆಗೆ ಹಾಗೂ ಕೈಗೆ ಗಂಭೀರವಾದ ಗಾಯವಾಗಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಲಾರಿಯು ಜಕಂಗೊಂಡಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading