ಸಿದ್ದಾಪುರ ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಸಾಂಸ್ಕೃತಿಕ
ಸ್ಪರ್ಧಾ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೋಲಸಿರ್ಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜನಪದ ಗೀತೆಯ ವಿಭಾಗದಲ್ಲಿ ಚೇತನಾ ವಿಜ್ಞಾನ ಪಿಯು ಕಾಲೇಜಿನ ದೀಕ್ಷಾ ಹೆಗಡೆ ಪ್ರಥಮ, ಚಿತ್ರಕಲೆಯಲ್ಲಿ ಮದನ ನಾಯ್ಕ ಪ್ರಥಮ, ಅಮೀಷ ಕವರ ಇಂಗ್ಲಿಷ್ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಲಿಖಿತ್, ಮತ್ತು ದಿನಿತ್, ಶೃತಿ ಬಿ, ಚೇತನಾ ನಾಯ್ಕ, ಭಾವನಾ ನಾಯ್ಕ, ವರ್ಷಿಣಿ ಮಡಿವಾಳ, ಚಿನ್ಮಯ ಭಟ್ಟ, ಧನ್ಯಾ ನಾಯ್ಕ, ಕೀರ್ತನಾ ಹೆಗಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯವರು,

ಪ್ರಾಚಾರ್ಯ ರಾಜು ಭಟ್ಟ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ. ಉಪನ್ಯಾಸಕರಾದ ಸ್ವಾತಿ ಹೆಗಡೆ, ಮೇಘನಾ ಮಡಿವಾಳ, ಪ್ರತಿಮಾ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading