ಆಯುಧ ನಿಯಮಾವಳಿಗಳು 2016ರ ನಿಯಮ 24ರಂತೆ ಆಯುಧ ಅನುಜ್ಞಪ್ತಿ ಮುಕ್ತಾಯಗೊಳ್ಳುವ ಕನಿಷ್ಠ 60 ದಿನಗಳ ಒಳಗಾಗಿ ನವೀಕರಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಜಿಲ್ಲಾಡಳಿತದಿಂದ ಸೂಚಿಸಲಾಗಿದೆ. ದಿ.31-12-2025ರಂದು ನವೀಕರಣ ಅವಧಿ ಮುಕ್ತಾಯಗೊಳ್ಳಲಿರುವ ಅನುಜ್ಞಪ್ತಿದಾರರು ಕೂಡಲೇ ಸಮರ್ಪಕ ದಾಖಲೆಗಳೊಂದಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ಆಯುಧ ಅನುಜ್ಞಪ್ತಿ, ನಮೂನೆ ಎ-3ಯಲ್ಲಿ ಅರ್ಜಿ, ನಮೂನೆ ಎಸ್-3ಯಲ್ಲಿ ವೈದ್ಯಕೀಯ ಪ್ರಮಾಣಪತ್ರ, ನಮೂನೆ ಎಸ್-4ರಲ್ಲಿ ಸ್ಥಳೀಯ ಪೊಲಿಸ್ ಠಾಣೆಯಿಂದ ಪಡೆದ ನಿರಪೇಕ್ಷಣಾಪತ್ರ, 5 ವರ್ಷಗ ಅವಧಿಗೆ ನವೀಕರಣ ಶುಲ್ಕ2,500 ನ್ನು ಕೆ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ, ಲೆಕ್ಕ ಶೀರ್ಷಿಕೆ ಸಂಖ್ಯೆಗೆ ಭರಣ ಮಾಡಿದ ಮೂಲ ಚಲನ್, ಹಿಡುವಳಿ ಪ್ರಮಾಣಪತ್ರ

ಕೃಷಿ ಬೆಳೆ ಸಂರಕ್ಷಣೆಗೆ ನೀಡುವ ಬಂದೂಕು ಪರವಾನಗಿ ಹಾಗೂ ಚಾಲ್ತಿಯಲ್ಲಿರುವ ಪರವಾನಗಿ ನವೀಕರಣಕ್ಕೆ ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಪತ್ರಬರೆಯುವ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.

ಬಂದೂಕು ಪರವಾನಗಿ ಹಾಗೂ ಚಾಲ್ತಿಯಲ್ಲಿರುವ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಆಗ್ರಹಿಸಿದ್ದರು. ಹರಿಪ್ರಕಾಶ ಕೋಣೆಮನೆಯವರ ಆಗ್ರಹಕ್ಕೆ ಈಗ ಸೂಕ್ತ ಸ್ಪಂದನೆ ದೊರೆತಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading