ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನು ಗಾಯಗೊಂಡ ಘಟನೆ ಯಲ್ಲಾಪುರ ಪಟ್ಟಣದ ಬೀಸಗೋಡ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.ಈ ಕುರಿತು ಯಲ್ಲಾಪುರ ತಾಲೂಕಿನ ಬೆಳಸೂರಿನ ರಾಮಚಂದ್ರ ಗೋಪಾಲ ಭಟ್ಟ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಆರೋಪಿ ಲಾರಿ ಚಾಲಕ ಹುಬ್ಬಳ್ಳಿಯ ಶಂಕರಪ್ಪ ಮಾರುತಿ ಅಣ್ಣಿಗೇರಿ ಎಂಬಾತ ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು ಬೀಸಗೋಡ ಕ್ರಾಸ್ ಸಮೀಪ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ರಾಮಚಂದ್ರ ಗೋಪಾಲ ಭಟ್ಟ ಅವರ ಅಕ್ಕನ ಮಗನ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನಿಗೆ ಮೊಣಕೈ ಹಾಗೂ ತುಟಿಗೆ ಗಾಯವಾಗಿದೆ.

ಘಟನೆಯಲ್ಲಿ ಎರಡೂ ವಾಹನಗಳು ಜಕಂಗೊಂಡಿದ್ದು, ಆರೋಪಿ ಲಾರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಮಚಂದ್ರ ಭಟ್ಟ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading