ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಯಲ್ಲಾಪುರ ತಾಲೂಕಿನಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ 300ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಭಗವದ್ಗೀತಾ ಅಭಿಯಾನ ನಡೆದಿದೆ. ಇನ್ನೂ ನೂರಾರು ಸ್ಥಳಗಳಲ್ಲಿ ಅಭಿಯಾನ ಆಯೋಜನೆಗೊಂಡಿದೆ. ದೇವಾಲಯಗಳಲ್ಲಿ, ಶಾಲೆಗಳಲ್ಲಿ, ಗೃಹಸ್ಥರ ಮನೆ,ಮನೆಗಳಲ್ಲಿ ಭಗವದ್ಗೀತೆಯ ಆರಾಧನೆ ನಡೆಯುತ್ತಿದೆ.

ಇಡಗುಂದಿ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ ಸಪ್ತಾಹ ನಡೆಯಿತು. ಕಾರ್ಯಕ್ರಮವನ್ನು ಅಭಿಯಾನದ ತಾಲೂಕಾ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಉದ್ಘಾಟಿಸಿದರು.

ತಾಲೂಕಾ ಮಾತೃ ಮಂಡಳಿಯ ಅಧ್ಯಕ್ಷೆ ಪಾರ್ವತಿ ಭಟ್ಟ ಸಣ್ಣೆಮನೆ, ಪ್ರಮುಖರಾದ ಚಂದ್ರಕಲಾ ಭಟ್ಟ, ವೆಂಕಟ್ರಮಣ ಭಟ್ಟ ಹಾಗೂ ಮಾತೆಯರು, ಗ್ರಾಮಸ್ಥರು ಇದ್ದರು.

ಆನಗೋಡ ಗಣಪತಿಕಟ್ಟೆ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ ಸಪ್ತಾಹದ ಮುಕ್ತಾಯ ಸಮಾರಂಭ ನಡೆಯಿತು.

ಮಾತೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಜಿ.ಎನ್.ಭಟ್ ತಟ್ಟಿಗದ್ದೆ, ಲಕ್ಷ್ಮೀನಾರಾಯಣ ಗುಮ್ಮಾನಿ, ಕೆ.ಟಿ.ಹೆಗಡೆ, ಕೆ.ಜಿ.ಬೋಡೆ, ಜಿ.ಪಿ.ಭಟ್ಟ, ಮಾರುತಿ ಆಚಾರಿ ಹಾಗೂ ಮಾತೆಯರು, ಗ್ರಾಮಸ್ಥರು ಇದ್ದರು. ರಾಧಾ ಭಟ್ಟ, ವಿದ್ಯಾ ಭಟ್ಟ, ಜಾಹ್ನವಿ ಭಟ್ಟ ನಿರ್ವಹಿಸಿದರು.

ಜಂಬ್ಗುಳಿ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ

ಕಲಗದ್ದೆಯಲ್ಲಿ ಭಗವದ್ಗೀತಾ ಅಭಿಯಾನ

ಬಳಗಾರಿನ ಸಣ್ಣೇಶ್ವರಕೇರಿಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading