ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನ.11ರ ರಾತ್ರಿ ಕಳ್ಳತನಕ್ಕೆ ಯತ್ನ ನಡೆಸಿ, ಬ್ಯಾಂಕಿಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಅರೋಪಿಗಳ ಪತ್ತೆಗೆ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಘಟನಾ ಸ್ಥಳದಲ್ಲಿದ್ದ ಸಿ.ಸಿ.ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ, ಕೃತ್ಯಕ್ಕೆ ಬಳಸಲಾದ ಕಾರಿನ ಚಲನವಲನ ಗಮನಿಸಿ ಬೆಳಗಾವಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಪೊಲೀಸರ ಮೆಲೆ ಹಲ್ಲೆಗೆ ಯತ್ನ: ಚಾಕುವಿನಿಂದ ಚುಚ್ಚಿಕೊಂಡ ಆರೋಪಿ

ಬಂಧಿತ ಆರೋಪಿಗಳನ್ನು ಮಹ್ಮದ್ ರಫೀಕ್ ಬಿ.ಸಿ.ರೋಡ್ ಬಂಟ್ವಾಳ, ಹುಕ್ಕೇರಿಯ ಗುಲ್ಜಾರ್ ಅಬ್ದುಲ್ ರೆಹಮಾನ್, ಮಕಾಂದಾರ್, ಬೈಲಹೊಂಗಲದ ಇಮ್ರಾನ್ ಕುತುಬುದ್ದೀನ್ ತಿಗಡಿ ಎಂದು ಗುರುತಿಸಲಾಗಿದೆ.

ಇವರಲ್ಲಿ ಪ್ರಮುಖ ಆರೋಪಿಯಾದ ಮಹ್ಮದ್ ರಫೀಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ನಂತರ ತನಗೆ ತಾನೇ ಚಾಕು ಚುಚ್ಚಿಕೊಂಡು ಗಾಯಗೊಂಡಿದ್ದನು. ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ವಿರುದ್ಧ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ 50 ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ : ಬ್ಯಾಂಕಿನಲ್ಲಿ ಕಳ್ಳತನಕ್ಕೆ ಯತ್ನ: ಬೆಂಕಿಯಿಂದ ಲಕ್ಷಾಂತರ ರೂ ವಸ್ತುಗಳು ನಾಶ

ಆರೋಪಿಗಳು ಕಳ್ಳತನಕ್ಕೆ ಯತ್ನ ನಡೆಸಿ, ಬ್ಯಾಂಕಿಗೆ ಬೆಂಕಿ ಹಚ್ಚಿರುವುದನ್ನು ವಿಚಾರಣೆಯ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತುಪಡಿಸಿಕೊಳ್ಳಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ನೇತ್ರತ್ವದಲ್ಲಿ ಆರೋಪಿಗಳನ್ನು ಬಂಧಿಸುವ ಕಾರ್ಯಚರಣೆ ನಡೆದಿದ್ದು, ಪಿಎಸ್ಸೈಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವಿರ ಕಾಂಬ್ಳೆ, ಸಿಬ್ಬಂದಿಗಳಾದ ದೀಪಕ ನಾಯ್ಕ, ಮಹ್ಮದ್ ಶಫೀ ಶೇಖ್, ಬಸವರಾಜ ಹಗರಿ, ಶೋಭಾ ನಾಯ್ಕ, ಗಿರೀಶ್ ಲಮಾಣಿ, ಸಂತೋಷ ಬಾಳೇರ, ಮಹಾವೀರ್ ಡಿ, ಎಸ್.ಪರಮೇಶ್ವರ, ಪರಶುರಾಮ ದೊಡ್ಮನಿ, ಉದಯ ಗುನಗಾ ಭಾಗವಹಿಸಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading