ಯಲ್ಲಾಪುರ ತಾಲೂಕಿನಾದ್ಯಂತ ಎಲ್ಲೆಡೆ ಭಗವದ್ಗೀತಾ ಅಭಿಯಾನವು ಸಂಭ್ರದಿಂದ ನಡೆಯುತ್ತಿದೆ. ತಾಲೂಕಿನಲ್ಲಿ ಈಗಾಗಲೇ 430ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಗವದ್ಗೀತಾ ಅಭಿಯಾನ ನಡೆದಿದ್ದು, ಈ ವರ್ಷ ರಾಜ್ಯದಲ್ಲಿಯೇ ಅತೀ ಹೆಚ್ಚು ಸ್ಥಳಗಳಲ್ಲಿ ಅಭಿಯಾನ ನಡೆದಿರುವ ತಾಲೂಕು ಎಂಬ ಹೆಗ್ಗಳಿಕೆ ಯಲ್ಲಾಪುರಕ್ಕೆ ದೊರೆತಿದೆ.

ಇನ್ನಷ್ಟು ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ತಿಳಿಸಿದ್ದಾರೆ.

ಸ್ವರ್ಣವಲ್ಲೀ ಶ್ರೀಗಳ ಮಾರ್ಗರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಯಲ್ಲಾಪುರ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ದೇವಾಲಯಗಳಲ್ಲಿ, ಶಾಲೆಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಹಾಗೂ ನೂರಾರು ಗೃಹಸ್ಥರ ಮನೆಗಳಲ್ಲಿ ಅಭಿಯಾನ ನಡೆದಿದೆ. ಮದುವೆ, ಗೃಹಪ್ರವೇಶ, ಉಪನಯನ, ನಿಶ್ಚಿತಾರ್ಥ ಮುಂತಾದ ಮಂಗಲಕಾರ್ಯಗಲ್ಲಿಯೂ ಭಗವದ್ಗೀತೆ ಮೊಳಗಿದೆ.

ಕುಂಬ್ರಾಳದ ವಿರೂಪಾಕ್ಷ ಕೋಟೆಮನೆಯವರ ಮನೆಯಲ್ಲಿ ಭಗವದ್ಗೀತಾ ಅಭಿಯಾನ

ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ

ಯಡಳ್ಳಿ ಕುಂದೂರಿನಲ್ಲಿ ಭಗವದ್ಗೀತಾ ಅಭಿಯಾನ

ಕರಡಿಗೆಮನೆಯಲ್ಲಿ ಭಗವದ್ಗೀತಾ ಅಭಿಯಾನ

ಆನಗೋಡ ಜನತಾ ಕಾಲೋನಿಯಲ್ಲಿ ನಡೆದ ಭಗವದ್ಗೀತಾ ಅಭಿಯಾನ

ಆನಗೋಡ ಗೋಳಿಗದ್ದೆ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ಕೋಟೆಮನೆಯಲ್ಲಿ ಭಗವದ್ಗೀತಾ ಅಭಿಯಾನ

ಚವತ್ತಿ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ

ಚಿನ್ನಾಪುರ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನ

ಮಣ್ಮನೆಯಲ್ಲಿ ನಡೆದ ಭಗವದ್ಗೀತಾ ಅಭಿಯಾನ

ಆನಗೋಡ ವಿಶ್ವನಾಥ ಭಟ್ಟ ಅವರ ಮನೆಯಲ್ಲಿ ಭಗವದ್ಗೀತಾ ಅಭಿಯಾನ

ಗಣಪತಿ ಕರುಮನೆ ಅವರ ಮನೆಯಲ್ಲಿ ಭಗವದ್ಗೀತಾ ಅಭಿಯಾನ

ಮಾಳಕೊಪ್ಪದಲ್ಲಿ ಭಗವದ್ಗೀತಾ ಅಭಿಯಾನ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading