ಪೂರ್ವ ಪ್ರಾಥಮಿಕ ಹಂತದಿಂದ ಪದವಿ ವರೆಗೆ ಗುಣಮಟ್ಟದ ಶಿಕ್ಷಣ ನೀಡಿಕೆಗೆ ಹೆಸರುವಾಸಿಯಾದ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ವಸತಿ ಸಹಿತ CET / NEET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ರೆಸಿಡೆನ್ಷಿಯಲ್ ಪಿಯು ಕಾಲೇಜನ್ನು ಆರಂಭಿಸಲಾಗುತ್ತಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜು ಹಾಗೂ ಧಾರವಾಡದ ಪ್ರತಿಷ್ಠಿತ ಐ.ಎಸ್. ಒ ಪ್ರಮಾಣಿತ ಶೈಕ್ಷಣಿಕ ಸಲಹಾ ಕಂಪನಿ, ನಿರ್ಮಲಾ ಎಜುಕೇಶನ್ ಟ್ರಸ್ಟ್ ನ ಇಮ್ಯಾಕ್ಯುಲೇಟ್ ಓರಾಕಲ್, ಸಹಯೋಗದಲ್ಲಿ ವಿಶ್ವದರ್ಶನದ ಪದವಿ ಪೂರ್ವ ಕಾಲೇಜಿನ ಆವಾರದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಲ್ಲಾಪುರದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರೆಸಿಡೆನ್ಷಿಯಲ್ PU ಕಾಲೇಜನ್ನು ಆರಂಭಿಸುತ್ತಿದ್ದೇವೆ. CET, NEET, JEE, CA foundation ಕೋರ್ಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ಆರಂಭಿಸಿದ್ದೇವೆ ಎಂದರು.

ಮುಂಬರುವ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದಲೇ CET, NEET, JEE, CA foundation ಕೋರ್ಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆಯನ್ನು ವಿಶ್ವದರ್ಶನ ಕೇಂದ್ರೀಯ (ಸಿಬಿಎಸ್ ಇ)ಶಾಲೆಯಲ್ಲಿ ಆರಂಭಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ‘ಟಾಪರ್ಸ್ ಟೂಲ್ ಕಿಟ್ ‘ ಪುಸ್ತಕ, ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುವ ವಿಶೇಷ ಪುಸ್ತಕ ಸ್ಟೂಡೆಂಟ್ ಗೈಡ್ ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಾಗಾರದಲ್ಲಿ ಇಮ್ಯಾಕುಲೆಟ್ ಓರಾಕಲ್ ನ ಮುಖ್ಯಸ್ಥ ಆರೋಗ್ಯಸ್ವಾಮಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕೆ ವಿದ್ಯಾರ್ಥಿಗಳ ವೃತ್ತಿ ಆಯ್ಕೆ ಹೇಗಿರಬೇಕು ಎಂಬುದರ ಕುರಿತು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಸವರಾಜ ಚಟ್ನಿ, ವೀರಣ್ಣ ಮುಪ್ಪೈಮಠ, ಪೂಜಾ ಶಿವಶೆಟ್ಟರ್, ಸವಿತಾ ಹೆಬ್ಬಳ್ಳಿ ಭಾಗವಹಿಸಿದ್ದರು. ಕಾರ್ಯಗಾರದಲ್ಲಿ ಎರಡು ತಾಲೂಕುಗಳ 220 ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯದ ಮೇಲೆ ನಡೆಸಿದ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆ ಬಿಸಗೊಡಿನ ದೀಕ್ಷಿತಾ ಎಸ್ ಭಟ್ ಪ್ರಥಮ, ಪ್ರಗತಿ ವಿಧ್ಯಾಲಯ ಭರತನಹಳ್ಳಿಯ ನಂದನ ಪಟಗಾರ ದ್ವಿತೀಯ, ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ಚೈತನ್ಯ ಕೃಷ್ಣ ಭಟ್ ತೃತೀಯ ಸ್ಥಾನ ಪಡೆದರು. ಪರೀಕ್ಷೆಯಲ್ಲಿ ಅಗ್ರ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ವಿಶ್ವದರ್ಶನ (ಸಿಬಿಎಸ್ ಇ) ಕೇಂದ್ರೀಯ ಶಾಲೆಯ ಹತ್ತನೇ ತರಗತಿ ಬ್ಯಾಚ್ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ ಹಾಗೂ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿಶ್ವದರ್ಶನ ಬಿ.ಸಿ.ಎ ಕಾಲೇಜು ಈಗಾಗಲೇ ಅಖಿಲಭಾರತ ತಾಂತ್ರಿಕ ಶಿಕ್ಷಣಪರಿಷತ್ತಿನ(ಏಐಸಿಟಿಇ)ಮಾನ್ಯತೆ ಪಡೆದಿದ್ದಲ್ಲದೆ,ಕ್ಯಾಂಪಸ್ ಸೆಲೆಕ್ಷನ್ ಮೂಲಕ ಬಹುಪಾಲು ವಿದ್ಯಾರ್ಥಿಗಳಿಗೆ ದೇಶೀಯ ಮತ್ತು ಎಂಎನ್ ಸಿ ಕಂಪೆನಿಗಳಲ್ಲಿ ಉದ್ಯೋಗ ನೇಮಕಾತಿ ಒದಗಿಸಲಾಗಿದೆ. ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮೂಲಕ 25 ಕ್ಕೂ ಹೆಚ್ಚು ಗುಣಮಟ್ಟದ ಪತ್ರಕರ್ತರನ್ನು ಮಾಧ್ಯಮ ಜಗತ್ತಿಗೆ ನೀಡಿದೆ.
: ಹರಿಪ್ರಕಾಶ ಕೋಣೆಮನೆ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading