ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಬೆಲೆಬಾಳುವ ತಂತಿಯನ್ನು ಕಳ್ಳರು ಕದ್ದೊಯ್ದ ಘಟನೆ ಯಲ್ಲಾಪುರ ತಾಲೂಕಿನ ಜನಶೆಟ್ಟಿಕೊಪ್ಪ ಹಾಗೂ ಕೈರಗಾಳಿ ಗ್ರಾಮದಲ್ಲಿ ನಡೆದಿದೆ.ಈ ಕುರಿತು ಕಿರವತ್ತಿಯ ಹೆಸ್ಕಾಂ ಶಾಖಾಧಿಕಾರಿ ವಿಶಾಲ ಹೈಗಾರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಜನಶೆಟ್ಟಿಕೊಪ್ಪದ ಟಿ.ಸಿ.ಯಿಂದ ಕೈರಗಾಳಿ ಗ್ರಾಮದ ಟಿ.ಸಿ.ವರೆಗೆ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಮೂರು ಲೈನಿನ ಅಂದಾಜು 484 ಮೀಟರ್ ಉದ್ದದ ಹೆಚ್.ಟಿ. ವಿದ್ಯುತ್ ತಂತಿಯನ್ನು ಕಳ್ಳರು ಕದ್ದೊಯ್ದಿದ್ದಾರೆ, ಹಾಗೂ ಕೈರಗಾಳಿ ಟಿ.ಸಿ.ಯಿಂದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ 210 ಮೀಟರ್ ಉದ್ದದ ಎರಡು ಲೈನ್ ವಿದ್ಯುತ್ ತಂತಿಯನ್ನೂ ಸಹ ಕಳ್ಳತನ ಮಾಡಲಾಗಿದೆ.

ಹೀಗೆ ಒಟ್ಟೂ 1872 ಮೀಟರ್ ಉದ್ದದ ಅಂದಾಜು 98,700 ರೂ ಮೌಲ್ಯದ ವಿದ್ಯುತ್ ತಂತಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಡಿ.11 ರಂದು ಮಧ್ಯಾಹ್ನ 11 ಗಂಟೆಯಿಂದ ಡಿ.15 ಬೆಳಿಗ್ಗೆ 10 ಗಂಟೆಯ ನಡುವುನ ಅವಧಿಯಲ್ಲಿ ವಿದ್ಯುತ್ ತಂತಿ ಕಳ್ಳತನ ನಡೆದಿದ್ದು, ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading