ಆನ್ ಲೈನ್ ಶಾಪಿಂಗ್ ನಲ್ಲಿ ಆಫರ್ ಇರುವುದಾಗಿ ತಿಳಿಸಿ, ಅಪರಿಚಿತರು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಘಟನೆ ನಡೆದಿದೆ.

ಈ ಕುರಿತು ಕಾರವಾರದ ಮುದಗಾದ ಸೀ-ಬರ್ಡ್ ಕಾಲೋನಿಯ ನಿವಾಸಿ ಸಚಿನ್ ಪ್ರಕಾಶ ದುರ್ಗೇಕರ್ ಕಾರವಾರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾರೋ ಅಪರಿಚಿತರು ಸಚಿನ್ ಅವರ ಮೊಬೈಲ್ ಗೆ ಕರೆ ಮಾಡಿ, ಆನ್ ಲೈನ್ ಶಾಪಿಂಗ್ ನಲ್ಲಿ ಆಫರ್ ಇರುವುದಾಗಿ ತಿಳಿಸಿ, ಲಿಂಕ್ ಒಂದನ್ನು ಕಳಿಸಿದ್ದರು.

ಈ ಲಿಂಕ್ ಓಪನ್ ಮಾಡಿ ಬ್ಯಾಂಕ್ ಖಾತೆಯ ವಿವರವನ್ನು ನಮೂದಿಸುವಂತೆ ತಿಳಿಸಿದ್ದರು. ಲಿಂಕ್ ಓಪನ್ ಮಾಡಿ ಬ್ಯಾಂಕ್ ಖಾತೆಯ ವಿವರವನ್ನು ನಮೂದಿಸುತ್ತಿದ್ದಂತೆ ಸಚಿನ್ ಅವರ ಬ್ಯಾಂಕ್ ಖಾತೆಯಿಂದ 97,000 ರೂ ಕಡಿತಗೊಂಡಿದೆ. ಮರುದಿನ ಸಚಿನ್ ಅವರ ಇನ್ನೊಂದು ಖಾತೆಯಿಂದ 40,000 ರೂ ಕಡಿತಗೊಂಡಿದೆ.

ಹೀಗೆ ಒಟ್ಟೂ 1,37,000 ರೂ ಹಣ ಸಚಿನ್ ಖಾತೆಯಿಂದ ಅಪರಿಚಿತರು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದು, ಅಪರಿಚಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading