ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಅರಣ್ಯ ಇಲಾಖೆ ಹಮ್ಮಿಕೊಂಡ ಎರಡು ದಿನಗಳ ವನ್ಯಜೀವಿ ತಾಣಗಳ ಭೇಟಿಯ ಪ್ರವಾಸಕ್ಕೆ ಗುರುವಾರ ತೆರಳಿದರು.

ದಾಂಡೇಲಿ,ಕುಳಗಿ, ಮರಗಳ ದಾಸ್ತಾನು, ಆನೆ ಕ್ಯಾಂಪ್, ಉದ್ಯಾನವನ, ಮಾಗೋಡು, ಜೇನುಕಲ್ಲು ಗುಡ್ಡ ಸೇರಿದಂತೆ ರಕ್ಷಿತ ಅರಣ್ಯ ಪ್ರದೇಶದಲ್ಲಿನ ಅರಣ್ಯ ತಾಣಗಳಲ್ಲಿ ಮಕ್ಕಳಿಗೆ ಕಾಡಿನ, ಜೀವವೈವಿಧ್ಯ ಪರಿಚಯಿಸುವ ಅರಿವಿನ ಕಾರ್ಯಕ್ರಮ ಇದಾಗಿದ್ದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದಾರೆ.

ಮುಖ್ಯಾಧ್ಯಾಪಕ ಎಂ ಕೆ ಭಟ್ಟ, ಅರಣ್ಯ ಇಲಾಖೆಯ ಕಾಶಿನಾಥ್, ದತ್ತಾತ್ರೇಯ ತಳವಾರ, ಶಿಕ್ಷಕಿ ಮಂದಾರ ಗೌಡ ಮುಂತಾದವರು ಪ್ರವಾಸ ತಂಡದಲ್ಲಿ ಮಕ್ಕಳ ಜೊತೆ ತೆರಳಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading