ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು, ದೇವಸ್ಥಾನದ ಒಳಗಿದ್ದ ಕಾಣಿಕೆ ಹುಂಡಿಯನ್ನು ಒಡೆದು ಹುಂಡಿಯಲ್ಲಿದ್ದ 7 ಸಾವಿರ ರೂ ಹಣವನ್ನು ಕದ್ದ ಕಳ್ಳನನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.

ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ಮೈಲಾರ ದೇವಾಲಯದಲ್ಲಿ ಡಿ.7ರಂದು ರಾತ್ರಿ ಈ ಕಳ್ಳತನ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಹಾಲಿ ಕೆಸರೊಳ್ಳಿ ನಿವಾಸಿ, ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪ್ರಸನ್ನ ಕುಮಾರ ಗೌಡರಮನೆ ಎಂಬಾತತನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತನು ಬನವಾಸಿಯ ದೇವಾಲಯವೊಂದರಲ್ಲಿಯೂ ಹುಂಡಿಯ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಬಂಧಿತ ಆರೋಪಿಯಿಂದ 2500 ರೂ ಹಣ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಹಿಂದೆಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading