ತೋಟದಲ್ಲಿನ 30 ಅಡಿಕೆ ಮರಗಳಲ್ಲಿದ್ದ ಹಸಿ ಅಡಿಕೆಯನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ಕಂಪ್ಲಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಕಂಪ್ಲಿಯ ವಿಶ್ವೇಶ್ವರ ಗಜಾನನ ಹೆಗಡೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿ.27ರ ಸಂಜೆ 5.30 ಗಂಟೆಯಿಂದ ಡಿ.28 ಸಂಜೆ 4 ಗಂಟೆಯ ನಡುವಿನ ಅವಧಿಯಲ್ಲಿ ವಿಶ್ವೇಶ್ವರ ಹೆಗಡೆ ಅವರ ಅಡಿಕೆ ತೋಟದಲ್ಲಿ 30 ಅಡಿಕೆ ಮರಗಳಲ್ಲಿದ್ದ ಅಂದಾಜು 14 ಸಾವಿರ ರೂ ಮೌಲ್ಯದ 2 ಕಿಂಟಾಲ್ 40 ಕೆ.ಜಿ ಹಸಿ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ.

ಅಡಿಕೆ ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವೇಶ್ವರ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading