ಯಲ್ಲಾಪುರ ತಾಲೂಕಿನ ಅರಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಇಡಗುಂದಿ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ರೇಖಾ ನಾಯ್ಕ ಕಲಿಕಾ ಹಬ್ಬದ ಮಹತ್ವದ ಬಗ್ಗೆ ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಬೆರೆತು ಕಲಿಕೆಯ ದೃಢಿಕರಣ ನೀಡುವ ಉತ್ತೇಜಕ ಕಾರ್ಯಕ್ರಮವಿದು. ಹಬ್ಬದ ವಾತಾವರಣದಲ್ಲಿ ವಿವಿಧ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರು ಎಸ್.ಡಿ.ಎಮ್ ಸಿಯ ಸಹಭಾಗಿತ್ವದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು, ಆತ್ಮವಿಶ್ವಾಸ ಬೆಳೆಸುವುದು, ಸೆಲ್ಪಿ ಕಾರ್ನರ್, ಶಾಲೆಯ ಸಾಧನೆಗಳ ಚಿತ್ರಣ ಹೀಗೆ ಇಲಾಖೆಯ ಸದಾಶಯವೇ ಕಲಿಕಾ ಹಬ್ಬವಾಗಿದ್ದು, ಅರಬೈಲ್ ಶಾಲೆಯಲ್ಲಿ ವಿಶಿಷ್ಟವಾಗಿ ಅರ್ಥಪೂರ್ಣವಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಶಾಲೆಯ ಮುಖ್ಯಾಧ್ಯಾಪಕಿ ಸಾಹಿತಿ, ಶಿವಲೀಲಾ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಟಿ.ಎಲ್.ಎಂ.ಪ್ರದರ್ಶನ, ಗಟ್ಟಿಓದು, ಸಂತಸದಾಯಕ ಕಲಿಕೆ, ಸಲಾಡ ತಯಾರಿಕೆ, ರಸಪ್ರಶ್ನೆ, ಕಥೆ ಹೇಳುವುದು,ಸ್ಮರಣಶಕ್ತಿ, ಪಾಲಕರೊಂದಿಗೆ ಮನರಂಜನೆ ಟ ಹೀಗೆ ಮಕ್ಕಳ ಪ್ರತಿಭೆ ಸೃಜನಾತ್ಮಕವಾಗಿ ಹೊರಹೊಮ್ಮಲು ಇಂತಹ ಶೈಕ್ಷಣಿಕ ಹಬ್ಬಗಳು ಸಹಾಯಕವಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಶಿಕ್ಷಣ ಸಂಯೋಜಕ ಸುಧಾಕರ ನಾಯ್ಕ, ಸುಬ್ರಾಯ ಗಾಂವ್ಕಾರ್, ಶ್ರೀಧರ ಅಣಲಗಾರ ಮುಂತಾದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷೆ ರೂಪಾ ಬಾಂದಿ ವಹಿಸಿದ್ದರು. ವಿಶ್ವೇಶ್ವರ ಹೆಗಡೆ ಗ್ರಾ.ಪಂ.ಸದಸ್ಯರು. ಬಿ.ಆರ್.ಪಿ ಪ್ರಶಾಂತ ಪಟಗಾರ, ಸಿ.ಆರ್.ಪಿ ಗಳಾದ,ಶಿವಾನಂದ ವೇರ್ಣೆಕರ ಚಂದ್ರಹಾಸ ನಾಯ್ಕ,ಅರವಿಂದ ನಾಯ್ಕ,ಮೋಹನ್ ನಾಯ್ಕ,ಕಲಾವತಿ ನಾಯಕ ಹಾಗೂ ಉಷಾ ನಾಯಕ, ನಾಗರಾಜ ಆಚಾರಿ ನಿವೃತ್ತ ಶಿಕ್ಷಕರು..ಸುರೇಶ ನಾಯಕ,ರಘುನಾಥ, ಅರವಿಂದ ಹೆಗಡೆ ಕೊಡ್ಲಗದ್ದೆ, ತ್ರೇಷಾ ನೋಹಾ.ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗುರುರಾಜ ಆಚಾರಿ. ಮತ್ತು ನಿರ್ಣಾಯಕ ರಾಗಿ ವಿವಿಧ ಕ್ಲಸ್ಟರ್ ನ ಶಿಕ್ಷಕರು ಆಗಮಿಸಿದ್ದರು. ಇಡಗುಂದಿ ಸಿ.ಆರ್.ಪಿ ಅಮೀತಾ ನಾಯ್ಕ ಸ್ವಾಗತಿಸಿದರು.

ಅರಬೈಲ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ಕಲಿಕಾ ಹಬ್ಬದ ಗೀತೆಗಳನ್ನು ಹೇಳಿದರು. ಸಹಶಿಕ್ಷಕ ಮಹೇಶ ಭಟ್ಟ ನಿರ್ವಹಿಸಿದರು. ಸುಶ್ಮೀತಾ ನಾಯಕ ವಂದಿಸಿದರು.

ಕಲಿಕಾ ಹಬ್ಬವನ್ನು ವಿನೂತನವಾಗಿ ಉದ್ಘಾಟನೆ ಮಾಡಲಾಯಿತು.. ಅದ್ದೂರಿ ಮೆರವಣಿಗೆಯ ಮೂಲಕ ಮಕ್ಕಳ ಸೃಜನಶೀಲ ಚಟುವಟಿಕೆಯ ಚಿತ್ರಪಟಗಳು, ಇಲಾಖೆಯ ಸೌಲಭ್ಯಗಳನ್ನು ಪ್ರತಿಬಿಂಬಿಸುವ ಛದ್ಮವೇಷ ಧರಿಸಿದ ವಿದ್ಯಾರ್ಥಿನಿ ತೃಪ್ತಿ ರಂಗೈಶೇಣ್ವಿ ಗಮನ ಸೆಳೆದಿದ್ದು ವಿಶೇಷವಾಗಿತ್ತು. ವಿವಿದ ವೇಷಭೂಷಣಗಳನ್ನು ಧರಿಸಿ ಅರಬೈಲ್ ಶಾಲಾ ಮಕ್ಕಳು ಭಾಗವಹಿಸಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading