ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಮಹಾ ಒಕ್ಕೂಟದಿಂದ ಗುರುವಾರ ಬೃಹತ್ ಜನಾಧಿಕಾರ ಸಮಾಮೇಶ ನಡೆಯಿತು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರಾಜ್ಯದ ನಾನಾ ಭಾಗಗಳ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸಮಾವೇಶದಲ್ಲಿ ಭಾಗವಹಿಸಿದ್ದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಉತ್ತರಕನ್ನಡ ಜಿಲ್ಲಾ ಸಂಚಾಲಕ ಎಂ.ಕೆ.ಭಟ್ ಯಡಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಐದು ವರ್ಷದ ಅವಧಿ ಮುಗಿಯುತ್ತಿದೆ. ಒಂದು ವರ್ಷದಿಂದ ಒಂದು ರೂಪಾಯಿ ಕೂಡ ಪಂಚಾಯಿತಕ್ಕೆ 15ನೇ ಹಣಕಾಸಿನ ಹಣ ಜಮಾ ಆಗಿಲ್ಲ, ನಮ್ಮ ಅವಧಿ ಮುಗಿಯುವುದರೊಳಗೆ ಚುನಾವಣೆಯನ್ನು ಮಾಡಬೇಕೆಂಬುದು ಕಾಯ್ದೆಯ ವಿಚಾರ ಆದರೂ ಅದನ್ನು ತಳ್ಳಿ ಹಾಕಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರಕಾರ ಮುಂದಾಗಿರುವುದದು, ಖಂಡನೀಯ ಎಂದು ಗುಡುಗಿದರು.

ನಾವು ಆಯ್ಕೆ ಮಾಡಿದ ನಮ್ಮ ಜನಪ್ರತಿನಿಧಿ ಒಂದೇ ಒಂದು ದಿವಸವು ನಮ್ಮ ಪರವಾಗಿ ಮಾತನಾಡಲಿಲ್ಲ, ಅಲ್ಲದೆ, ತಮಗೆ ಬಂದ ಅನುದಾನ ವನ್ನು ಕೂಡ ಸಮರ್ಪಕವಾಗಿ ಸರಿಯಾಗಿ, ಹಂಚಿಕೆ ಮಾಡಿಲ್ಲವೆಂಬುದು ಬೇಸರ ತಂದಿದೆ ಎಂದು ಹೇಳಿದರು. ಸರ್ಕಾರ ತಳಮಟ್ಟದಿಂದ ಯೋಜನೆಗಳನ್ನು ಸಿದ್ಧಪಡಿಸಿ, ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ ಇಂದು ಮೇಲಿನ ಸ್ಥರದಲ್ಲಿ ಕುಳಿತ ಅಧಿಕಾರಿಗಳು, ನಮಗೆ ಬೇಕು ಬೇಡವೋ ಎಂಬುದನ್ನು ತಿಳಿಯದೆ ಯೋಜನೆಗಳನ್ನು ಸಿದ್ಧಪಡಿಸಿ ಪಂಚಾಯಿತದವರು ಅದನ್ನು ಅನುಷ್ಠಾನ ಮಾಡಬೇಕು ಎಂಬುದು ಸರಿಯಾದ ಕ್ರಮವಲ್ಲ.

ಮೇಲಿಂದ ಬಂದ ಸುತ್ತೋಲೆಗಳಿಗೆ ನಾವು ಕೆಲಸ ಮಾಡಬೇಕಾಗಿದೆಯೇ ಹೊರತು ನಮ್ಮ ಪಂಚಾಯಿತಿಯಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುದನ್ನ ನಾವು ತಿಳಿಸಿದಾಗ ಅದಕ್ಕೆ ಅವಕಾಶವನ್ನು ಕೊಡದೆ ಇರುವುದು ಖಂಡನೆಯ ಎಂದರು. ಸರ್ಕಾರ ಕೂಡಲೇ ಚುನಾವಣೆಯನ್ನು ಘೋಷಣೆ ಮಾಡಬೇಕು. ಇಲ್ಲವಾದರೆ ಚುನಾವಣೆ ನಡೆಯುವವರೆಗೆ, ಈಗಿರುವ ಸಮಿತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆಯೂ ಹಲವು ಬಾರಿ ಎಂ.ಕೆ.ಭಟ್ ಯಡಳ್ಳಿ ಈ ಬಗ್ಗೆ ಧ್ವನಿ ಎತ್ತಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading