ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಹಿರೇಸರದಲ್ಲಿರುವ ಮನಸ್ವಿನೀ ವಿದ್ಯಾನಿಲಯವು ಉತ್ತಮ ಗುಣಮಟ್ಟದ, ಸಂಸ್ಕಾರಯುತ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಯಶಸ್ವಿಯಾಗಿ 8 ವರ್ಷಗಳನ್ನು ಪೂರೈಸಿದ ಮನಸ್ವಿನೀ ವಿದ್ಯಾಲಯದಲ್ಲಿ ಶಿಸ್ತುಬದ್ಧವಾದ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.

ಮಕ್ಕಳ ಸುಗಮ ಶಿಕ್ಷಣದ ಅನುಕೂಲಕ್ಕಾಗಿ ಸುಸಜ್ಜಿತವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶುಚಿ,ರುಚಿಯಾದ ಸಸ್ಯಾಹಾರಿ ಊಟದ ವ್ಯವಸ್ಥೆ, ಜವಾಬ್ದಾರಿಯುತ ಮೇಲ್ವಿಚಾರಕರ ಸುಪರ್ದಿಯಲ್ಲಿ ವಿಶಾಲವಾದ ಸಕಲ ಸೌಲಭ್ಯಗಳಿರುವ ರಕ್ಷತಾ ವ್ಯವಸ್ಥೆಯನ್ನು ಹೊಂದಿರುವ ವಸತಿ ನಿಲಯ ಲಭ್ಯವಿದೆ. ಪ್ರವೇಶಾತಿಗೆ ಸೀಮಿತ ಅವಕಾಶ ಇದೆ. ಮೊದಲು ಬಂದವರಿಗೆ ಆದ್ಯತೆ (5ರಿಂದ 9 ನೇ ತರಗತಿ ವರೆಗಿನ ಬಾಲಕ, ಬಾಲಕಿಯರಿಗೆ ಮಾತ್ರ)

ಮನಸ್ವಿನೀ ವಿದ್ಯಾ ಸಂಸ್ಥೆಗೆ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಆಗಮಿಸಿ ಆಶೀರ್ವದಿಸಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯರು ಭೇಟಿನೀಡಿ ಇಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.

ಮನಸ್ವಿನೀ ವಿದ್ಯಾಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಮ್ಮ ಮನಸ್ವಿನೀ ವಿದ್ಯಾಲಯದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಊಟ,ವಸತಿ, ವಿವಿಧ ಊರುಗಳಿಗೆ ಶಾಲಾ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿಯಾಗಿದೆ. ನಮ್ಮ ಸಂಸ್ಥೆಯ ಈ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿನಂತಿಸುತ್ತೇವೆ: ರೇಖಾ ಭಟ್ ಕೋಟೆಮನೆ. ಅಧ್ಯಕ್ಷರು ಮನಸ್ವಿನೀ ವಿದ್ಯಾ ನಿಲಯ

ಸಂಸ್ಕಾರಯುತ ಆಂಗ್ಲ ಮಾಧ್ಯಮ ಶಿಕ್ಷಣ, ಆಟಗಳ ಮೂಲಕ ಪಾಠ, ಭಗವದ್ಗೀತೆ, ಧ್ಯಾನ,ಶ್ಲೋಕ, ಸಂಗೀತ,ನೃತ್ಯ, ಕರಾಟೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಿಕೆ, ಅಬಾಕಸ್ ತರಗತಿಗಳು, ಉತ್ತಮ ಕಲಿಕಾ ಉಪಕರಣಗಳು, ನೂತನ ಸುಸಜ್ಜಿತ ಶಾಲಾ ಕೊಠಡಿ, ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆ, ಶಾಲಾ ವಾಹನದ ವ್ಯವಸ್ಥೆ, ಹಳ್ಳಿಯ ವಾತಾವರಣ, ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ, ಸ್ಮಾರ್ಟ್ ತರಗತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಿಕೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಶಾಲಾ ಪ್ರವೇಶಾತಿ ನೋಂದಣಿ ಹಾಗೂ ವಸತಿ ವ್ಯವಸ್ಥೆಗಾಗಿ ಸಂಪರ್ಕಿಸಿ

#Sponsored

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading