ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಅಭಿಯಾನ: ಅತಿದೊಡ್ಡ ಸಾಮೂಹಿಕ ಪ್ರಮಾಣ ವಚನ ಸ್ವೀಕಾರದೊಂದಿಗೆ ವಿಶ್ವ ದಾಖಲೆ ಸೃಷ್ಟಿ
ಗುಜರಾತ ರಾಜ್ಯದ ವಡೋದರಾ ನಗರ ಪೊಲೀಸ್ಇಲಾಖೆಯು ವಡೋದರಾ ಪೊಲೀಸ್ ಕಮಿಷನರ್ ನರಸಿಂಹ ಕೋಮಾರ್ ಇವರ ದೂರದರ್ಶಿತ್ವದ ನಾಯಕತ್ವದಲ್ಲಿ, ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಶೀರ್ಷಿಕೆಯಡಿ ಅತಿದೊಡ್ಡ ಸಾಮೂಹಿಕ ಪ್ರಮಾಣ ವಚನ ಸ್ವೀಕಾರ ಅಭಿಯಾನವನ್ನು ಆಯೋಜಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿ ವಿಶ್ವ ದಾಖಲೆ ನಿರ್ಮಿಸಿದೆ.
ಈ ಅಭೂತಪೂರ್ವ ಅಭಿಯಾನವು ವಡೋದರಾದ ನವಲಖಿ ಮೈದಾನದಲ್ಲಿ ನಡೆದ ವಡೋದರಾ ಮ್ಯಾರಥಾನ್ ಸಂದರ್ಭದಲ್ಲಿ ಕೇವಲ ಒಂದು ನಿಮಿಷದೊಳಗೆ ಯಶಸ್ವಿಯಾಗಿ ನಡೆಯಿತು. ಅಲ್ಲಿ 1,08,000 ಕ್ಕೂ ಹೆಚ್ಚು ಭಾಗವಹಿಸುವವರು ಮತ್ತು ಆಮಂತ್ರಿತರು ಒಟ್ಟಾಗಿ ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಲು ಪ್ರತಿಜ್ಞೆ ಮಾಡಿದರು.
ಈ ಉಪಕ್ರಮದಲ್ಲಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಓಟಗಾರರು, ಎನ್‍ಜಿಒಗಳು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ವಿಶೇಷವಾಗಿ ದಿವ್ಯಾಂಗರು (ವಿಕಲಚೇತನರು) ಉತ್ಸಾಹದಿಂದ ಭಾಗವಹಿಸಿದ್ದರು. ಇದು ಅಭಿಯಾನದ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಪ್ರತಿಬಿಂಬಿಸಿತು. ಈ ಮಹೋನ್ನತ ಸಾಧನೆಯನ್ನು ಗುರುತಿಸಿ, ಲಂಡನ್‍ನ ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್ ಅಧಿಕೃತವಾಗಿ ತೀರ್ಪು ನೀಡಿ ವಡೋದರಾ ನಗರ ಪೊಲೀಸರಿಗೆ ದಾಖಲೆಯ ಪ್ರಮಾಣಪತ್ರವನ್ನು ನೀಡಿದೆ.
ಅಭಿಯಾನದ ಅಸಾಧಾರಣ ಯೋಜನೆ, ಸಮನ್ವಯ ಮತ್ತು ಅನುಷ್ಠಾನವನ್ನು ಶ್ಲಾಘಿಸಿ, ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಡಾ. ಮನೀಷಾ ವಕೀಲ ಅವರು ಚಾರ್ಟರ್ಡ್ ಅಧಿಕಾರಿ ದಿವ್ಯಾಂಗ್ ಗಾಂಧಿ ಅವರ ಸಮ್ಮುಖದಲ್ಲಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಅನೇಕ ಗಣ್ಯರು ಸಾಕ್ಷಿಯಾದರು. ಈ ಗಮನಾರ್ಹ ಸಾಧನೆಗಾಗಿ, ಲಂಡನ್‍ನ ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್‍ನ ಸಿಇಒ ಅಡ್ವೊಕೇಟ್ ಸಂತೋಷ್ ಶುಕ್ಲಾ ಮತ್ತು ಇಡೀ ಡಬ್ಲ್ಯೂಬಿಆರ್ ತಂಡವು, ಫಿಟ್ ಇಂಡಿಯಾ ಮತ್ತು ಮಾದಕ ದ್ರವ್ಯ ಮುಕ್ತ ಭಾರತ ಉಪಕ್ರಮಗಳಿಗೆ ನೀಡಿದ ಮಾದರಿ ಕೊಡುಗೆಗಾಗಿ ವಡೋದರಾ ನಗರ ಪೆÇಲೀಸರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು. ಈ ವಿಶ್ವ ದಾಖಲೆಯು ಸಾಮೂಹಿಕ ಜವಾಬ್ದಾರಿ, ಸಾಮಾಜಿಕ ಬದ್ಧತೆ ಮತ್ತು ಭಾರತಕ್ಕೆ ಆರೋಗ್ಯಕರ, ಮಾದಕ ದ್ರವ್ಯ ಮುಕ್ತ ಭವಿಷ್ಯವನ್ನು ನಿರ್ಮಿಸುವ ನಗರದ ಸಂಕಲ್ಪದ ಸಂಕೇತವಾಗಿದೆ.
ವಡೋದರಾ ಪೊಲೀಸ್ ಕಮಿಷನರ್ ನರಸಿಂಹ ಕೋಮಾರ್ ಅವರು ಮೂಲತಃ ಯಲ್ಲಾಪುರ ತಾಲೂಕಿನ ಬೀಗಾರಿನವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ