ಫೆ.11ರಿಂದ ಫೆ.19ರ ವರೆಗೆ ಅದ್ದೂರಿಯಾಗಿ ನಡೆದ ಯಲ್ಲಾಪುರ ಗ್ರಾಮದೇವಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ, ಭದ್ರತಾ ಕ್ರಮಗಳು ಮತ್ತು ಸಾರ್ವಜನಿಕ ಶಿಸ್ತು ಕಾಪಾಡುವಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಗುರುವಾರ ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾತ್ರೆ ಯಶಸ್ವಿಯಾಗಿ ನೆರವೇರಲು ಪೊಲೀಸ್ ಇಲಾಖೆಯ ಸಮರ್ಪಿತ ಸೇವೆಯು ಪ್ರಮುಖ ಕಾರಣವಾಗಿದೆ. ಜನರ ಸುರಕ್ಷತೆಗಾಗಿ ಹಗಲು-ರಾತ್ರಿ ಶ್ರಮಿಸಿದ ಪ್ರತಿಯೊಬ್ಬ ಸಿಬ್ಬಂದಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ: ಯಲ್ಲಾಪುರ ಜಾತ್ರೆಗೆ ವಿದ್ಯುಕ್ತ ತೆರೆ: ಗ್ರಾಮದೇವಿಯರ ಭವ್ಯ ಮೆರವಣಿಗೆ ಸಂಪನ್ನ

ಸಿಪಿಐ ರಮೇಶ ಹಾನಾಪುರ, ಪಿಎಸ್ಸೈಗಳಾದ ಸಿದ್ದು ಗುಡಿ, ರಾಜಶೇಖರ ವಂದಲಿ, ಮಹಾವಿರ ಕಾಂಬ್ಳೆ, ಶೇಡಜೀ ಚಹ್ವಾಣ, ಹಾಗೂ ವಿವಿದೆಡೆಯಿಂದ ಆಗಮಿಸಿ ಜಾತ್ರಾ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗಣೇಶ ಹೆಗಡೆ ಪಣತಗೇರಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading