ಯಲ್ಲಾಪುರ ತಾಲೂಕಿನ ಬಳಗಾರಿನಲ್ಲಿ ಐದನೇ ವರ್ಷದ ಆಲೆಮನೆ ಹಬ್ಬವು ಫೆ.21 ಶನಿವಾರ ಸಂಜೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ.

ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿರುವ ಬಳಗಾರ ಆಲೆಮನೆ ಹಬ್ಬವು ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿದ್ದು, ಜನರ ಮನಗೆದ್ದಿದೆ. ಬಳಗಾರ ಕಾಲೋನಿಯಲ್ಲಿ ಶನಿವಾರ ನಡೆಯಲಿರುವ ಆಲೆಮನೆ ಹಬ್ಬಕ್ಕೆ ಸಂಘಟಕರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಆಲೆಮನೆ ಹಬ್ಬಕ್ಕೆ ಬಂದವರಿಗೆ ಉಚಿತವಾಗಿ ಸಿಹಿ,ಸಿಹಿಯಾದ ಕಬ್ಬಿನ ಹಾಲು, ಮಿರ್ಚಿಭಜಿ, ಮಂಡಕ್ಕಿ ಹಾಗೂ ವಿವಿಧ ತಿನಿಸುಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ.

ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಯುವ ಮುಖಂಡ ವಿವೇಕ ಹೆಬ್ಬಾರ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಲೆಮನೆ ಹಬ್ಬಕ್ಕೆ ಆಮಂತ್ರಿಸಲಾಗಿದೆ. ಐದನೇ ವರ್ಷದ ಈ ಆಲೆಮನೆ ಹಬ್ಬಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಘಟಕರಾದ ಗಣಪತಿ ಪಟಗಾರ ವಿನಂತಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading