ಯಲ್ಲಾಪುರ ತಾಲೂಕಿನ ವಿವಿದೆಡೆ ಮಂಗಳವಾರ ಮಿಂಚು, ಗುಡುಗಿನ ಅಬ್ಬರದೊಂದಿಗೆ ಜೋರಾಗಿ ಮಳೆ ಸುರಿದಿದೆ. ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆಯಿಂದ ಐದು ಗಂಟೆಯ ವರೆಗೆ ಮಳೆ ಸುರಿದಿದೆ.

ತಾಲೂಕಿನ ಇಡಗುಂದಿ, ಮಂಚಿಕೇರಿ ಮುಂತಾದ ಭಾಗಗಳಲ್ಲಿಯೂ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಸ್ಥಗಿತವಾಗಿತ್ತು. ಕಳೆದ ಒಂದು ವಾರದಿಂದ ಬಿಸಿಲ ಬೇಗೆ, ಸೆಕೆಯಿಂದ ಹೈರಾಣಗಿದ್ದ ಜನರಿಗೆ ಮಂಗಳವಾರ ಸಂಜೆ ಸುರಿದ ಮಳೆಯು ತಂಪಾದ ಅನುಭವ ನೀಡಿದೆ. ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಜಿಲ್ಲೆಯ ವಿವಿದೆಡೆ ಮಳೆ ಸುರಿದಿದೆ.

ಮಂಗಳವಾರ ಶಿರಸಿ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಮಂಗಳವಾರದಿಂದ ಮಾರಿಕಾಂಬಾ ಜಾತ್ರೆ ಆರಂಭವಾಗಿದ್ದು, ಜಾತ್ರೆಯ ಮೊದಲ ದಿನವೇ ಮಳೆಯ ಸಿಂಚನವಾಗಿ ವಾತಾವರಣ ತಂಪಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading