ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ತಂಡದವರು ವಿವಿಧ ಹೋಟೆಲ್ ಗಳ ಮೇಲೆ ಧಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ ಪೊಲೀಸರ ಕಾರ್ಯಾಚರಣೆ – ಅಂತರ್ ರಾಜ್ಯ ದರೋಡೆಕೋರರ ಬಂಧನ

ಶಿರಸಿಯ ನಗರದಲ್ಲಿರುವ ವಿವಿಧ ಹೋಟೆಲ್ ಗಳ ಮೇಲೆ ಧಿಡೀರ್ ದಾಳಿ ನಡೆಸಿದ ಅಧಿಕಾರಿಗಳ ತಂಡದವರು, ನಿಷೇಧಿಸಲ್ಪಟ್ಟ ಬಣ್ಣ ಹಾಗೂ ಅಜಿನೋ ಮೋಟಸ್ ಟೇಸ್ಟಿಂಗ್ ಪೌಡರ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡು ಆಹಾರ ತಯಾರಕರಿಗೆ ಎಚ್ಚರಿಕೆ ನೀಡಿ ಇನ್ನು ಮುಂದೆ ಕಡ್ಡಾಯವಾಗಿ ಇಂತಹ ಅನಪೇಕ್ಷಿತ ವಸ್ತುಗಳನ್ನ ಬಳಸದಂತೆ ಸೂಚಿಸಿದರು. ಹಾಗೂ ಹೋಟೆಲುಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಮಧುಕರ್ ಪಾಟೀಲ್ ನೇತೃತ್ವ ವಹಿಸಿದ್ದರು. ತಂಡದಲ್ಲಿ ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಜಾತ್ರಾ ವಿಶೇಷ ಅಧಿಕಾರಿ ಅರುಣ ಕಾಶಿ ಭಟ್, ಹಿರಿಯ ಕ್ಷಯ ರೋಗ ಮೇಲ್ವಿಚಾರಕರಾದ ಉದಯಶಂಕರ ಭಂಡಾರಿ, ಫಾರ್ಮಸಿ ಅಧಿಕಾರಿಗಳಾದ ಮಹೇಶ ಡಿ ನಾಯಕ, ಪ್ರವೀಣ ಆಚಾರಿ ಹಾಗೂ ಶ್ರೀನಿವಾಸ್ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading