ಅಕ್ರಮವಾಗಿ ಲಾರಿಯಲ್ಲಿ ಹಿಂಸಾತ್ಮಕವಾಗಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಮಧ್ಯರಾತ್ರಿಯ ಸಮಯದಲ್ಲಿ ಆರೋಪಿಗಳಾದ ಲಾರಿ ಚಾಲಕ ಮೈಸೂರಿನ ಮಹಮ್ಮದ್ ರಫಿ ಜಾಫರ್ ಪಾಷಾ ಹಾಗೂ ಕ್ಲೀನರ್ ಬೆಲ್ಲದಬಾಗೇವಾಡಿಯ ದ್ಯಾನೇಶ ಎಂಬುವವರು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಈಚರ್ ಲಾರಿಯಲ್ಲಿ 12 ಹೋರಿಗಳು, 4 ಕೋಣಗಳು, 3 ಎಮ್ಮೆಗಳು ಸೇರಿದಂತೆ ಒಟ್ಟೂ 19 ಜಾನುವಾರುಗಳನ್ನು ವಧೆ ಮಾಡಲು ಮಾರಾಟ ಮಾಡುವ ಉದ್ದೇಶದಿಂದ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದರು.

ಜಾನುವಾರುಗಳನ್ನು ಲಾರಿಯೊಳಗೆ ಹಿಂಸಾತ್ಮಕವಾಗಿ ಕಟ್ಟಿಕೊಂಡು ಕಲಘಟಗಿ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಹೆದ್ದಾರಿಯಲ್ಲಿ ಕೇರಳ ಕಡೆಗೆ ಹೋಗುತ್ತಿರುವಾಗ ಯಲ್ಲಾಪುರ ಪಟ್ಟಣದ ಜೋಡುಕೆರೆಯ ಸಮೀಪ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಶಕ್ಕೆ ಪಡೆದ ಜಾನುವಾರುಗಳ ಮೌಲ್ಯ 4,85000 ರೂ ಎಂದು ಹಾಗೂ ಲಾರಿಯ ಮೌಲ್ಯ 6 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading