ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದ ವರ್ಧಂತಿ ಉತ್ಸವವು ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.

ಈ ನಿಮಿತ್ತ ದೇವಾಲಯದಲ್ಲಿ ನವಚಂಡಿ ಹವನ, ಕಲಾವೃದ್ಧಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪೂರ್ಣಾಹುತಿ, ಶ್ರೀದೇವರಿಗೆ ಮಹಾಪೂಜೆ ನೆರವೇರಿತು.

ಗುರುಪಾದಪೂಜೆ, ಗುರು ಭಿಕ್ಷೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ನಡೆದ ಧರ್ಮ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ವಿದ್ವಾಂಸರಾದ ಪಿ.ಎನ್.ಶಾಸ್ತ್ರಿ, ನಾರಾಯಣ ಭಟ್ಟ ಉಮ್ಮಚಗಿ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ಗಂಗೇಮನೆ ಅವರನ್ನು ಪುರಸ್ಕರಿಸಲಾಯಿತು.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading