ಯಲ್ಲಾಪುರ ತಾಲೂಕಿನ ಆನಗೋಡ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರದಿಂದ ಆರಂಭಗೊಂಡ ಅಷ್ಟಬಂಧ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.

ಗುರುವಾರ ದೇವಾಲಯದಲ್ಲಿ ಗಣಪತಿ ಪೂಜೆ, ಕಲಶ ಸ್ಥಾಪನೆ, ಪುಣ್ಯಾಹ, ಪೂಜಾ ಹವನ, ಸ್ಥಾನ ಶುದ್ಧಿ ಹವನ, ಬಿಂಬ ಶುದ್ಧಿ ಹವನ, ನಹಗ್ರಹ ಹವನ, ಗಣಪತ್ಯಥರ್ವಶೀರ್ಷ ಹವನ ನಡೆಯಿತು. ಸಾಯಂಕಾಲ ಶ್ರೀಸೂಕ್ತ ಪಾರಾಯಣ, ಪುರುಷ ಸೂಕ್ತ ಪಾರಾಯಣ, ಪ್ರತಿಷ್ಠಾಂಗ ಹವನಗಳು ನಡೆದವು. ವೇ.ಗಜಾನನ ಹಿರೇ ಗೋಕರ್ಣ ಅವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗುರುವಾರ ಮಾತೆಯರಿಂದ ಭಜನೆ, ಶಾಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ನಡೆಯಿತು.

===========

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading