ಸಾಧಕ ವಿದ್ಯಾರ್ಥಿಗಳ ಗರಡಿಮನೆ ಎಂದೇ ಹೆಸರಾದ ಧಾರವಾಡ ನಗರದ ಅರ್ಜುನ ಪಿಯು ಕಾಲೇಜಿನ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ಆವೃತ್ತಿಯ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಅರ್ಜುನ ಕಾಲೇಜಿನ ವಿದ್ಯಾರ್ಥಿ ದರ್ಶನ್ ಭಟ್ ಒಟ್ಟೂ 600 ಅಂಕಗಳಿಗೆ 592 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದಿದ್ದು, ಈ ಕಾಲೇಜಿನ ವಿದ್ಯಾರ್ಥಿನಿ ಪ್ರಣತಿ ಮೆಣಸುಮನೆ 591 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆಯುವ ಮೂಲಕ ಈ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಕಾಲೇಜಿನ ಹಲವು ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳನ್ನು ದಾಖಲಿಸಿದ್ದಾರೆ. ಪ್ರಮುಖವಾಗಿ ಅನ್ನೋಲ್ ಪ್ರಭು (588), ಅನ್ನಪೂರ್ಣ ನಾಯ್ಕ (585), ಆದರ್ಶ ಆರ್ ಭಟ್ಟ (585), ವಿನೀತ್ ಚೌಹಾಣ್ (585), ಅನನ್ಯ ಶಾಸ್ತ್ರಿ (584), ಮಾನ್ಯ ಹೆಗಡೆ (584),

ಚಿನ್ಮಯಿ ಶಾನಭಾಗ, (584), ಪ್ರೀತಮ್ ಚವ್ಹಾಣ್ (584), ಸುಧನ್ವ ದೇಶಪಾಂಡೆ (582), ಅನನ್ಯ ಪೂಜಾರ್ (581), ಈಶಾನ ಶಾನಭಾಗ (580), ನಿಧಿ ಹಬ್ಬು (579), ಸಂಜನಾ ಪಂಡಿತ್ (579), ಆದರ್ಶ ಎ ಭಟ್ (578), ಸಿಂಚನಾ ಭಟ್ (578),

ವಿಶ್ವೇಶ್ವರ (578), ರೇಣುಕಾ ಪಾಟೀಲ (577), ಸಾಧನಾ ದೇಶಪಾಂಡೆ (577), ದರ್ಶನ್ ನಾಯ್ಕ (576), ಕೇದಾರ ಜೋಶಿ (576), ಸಮೀಕ್ಷಾ ಹೆಗಡೆ (576), ಅನೀಶ್ ನಾಯ್ಕ (575), ಪ್ರೀತಂ ಯಡಹಳ್ಳಿ (574), ಸುಶಾಂತ್ ಎಂ ನಾಯ್ಡ್ (574), ಆಕಾಶ್ ಎಂ ರಾಥೋಡ್ (573),

ಸೃಜನ್ ಪಾಟೀಲ್ (573), ಸಚಿನ್ ಜೋಶಿ (572), ಸತೀಶ್ ಹೆಗಡೆ (572), ಯಶಸ್ವಿನಿ ನೆಗಲೂರು (572), ಅನುಜ್ಞಾ ಗಾಂವ್ಕಾರ್ (571), ಸುಚೇತ್ ಭಟ್ಟ (571) ಹಾಗೂ ಅಪೂರ್ವ ಹೆಗಡೆ (570) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿರಂತರ ಪರಿಶ್ರಮದ ಫಲವಾಗಿ ಸಂಸ್ಕøತದಲ್ಲಿ 11 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 4, ರಸಾಯನಶಾಸ್ತ್ರದಲ್ಲಿ 1, ಗಣಿತಶಾಸ್ತ್ರದಲ್ಲಿ 20, ಗಣಕವಿಜ್ಞಾನದಲ್ಲಿ 9, ಜೀವಶಾಸ್ತ್ರದಲ್ಲಿ 2 ಸಂಖ್ಯಾಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಈ ಸಾಧಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕಾಲೆಜಿನ ವತಿಯಿಂದ ಶುಭ ಹಾರೈಸಲಾಗಿದೆ.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading