ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಕ್ರಿಕೆಟ್ ಅಭಿಮಾನಿಗಳ ಕಲರವ!
ಯಲ್ಲಾಪುರ ತಾಲೂಕಿನ ಕಳಚೆಯ ಕ್ರಿಕೆಟ್ ಅಭಿಮಾನಿಗಳ ತಂಡವೊಂದು ಕಳಚೆಯಿಂದ ಬೆಂಗಳೂರಿಗೆ ಪ್ರಯಾಣಿಸಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಪ್ರಿಮಿಯರ್ ಲೀಗ್ ಬ್ಯಾನರ್ ನೊಂದಿಗೆ ಕ್ರಿಕೆಟ್ ವೀಕ್ಷಿಸಿ, ಸಂಭ್ರಮಿಸಿದೆ.
ಸತತವಾಗಿ ಕಳಚೆ ಪ್ರೀಮಿಯರ್ ಲೀಗ್ ಕೆಪಿಲ್ ಸಂಘಟನೆಯ ತಂಡದವರು ಆರ್.ಸಿ.ಬಿ. ಮ್ಯಾಚ್ ನೋಡಲು ಕಳಚೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಗೆ ಪ್ರಯಾಣಬೆಳೆಸಿ ಕ್ರಿಕೆಟ್ ಬಗೆಗಿನ ತಮ್ಮ ಅಭಿಮಾನವನ್ನು ಪ್ರಕಟಿಸಿದ್ದಾರೆ.
ಈ ವರ್ಷವಂತೂ ಮ್ಯಾಚ್ ನೋಡಲು ಟಿಕೆಟ್ ಸಿಗುವುದು ಎಂದರೆ ಮರುಭೂಮಿ ಯಲ್ಲಿ ನೀರು ಸಿಕ್ಕಿದಂತೆ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೂ ಸತತವಾಗಿ ಪ್ರಯತ್ನಿಸಿ, ಟಿಕೆಟ್ ಪಡೆದುಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಾರೆ ಕಳಚೆಯ ಕ್ರಿಕೆಟ್ ಅಭಿಮಾನಿಗಳು.
ಸ್ಥಳೀಯರಾದ ರವೀಂದ್ರ ಭಾಗ್ವತ್ ಅವರು ಸತತವಾಗಿ ಪ್ರಯತ್ನಿಸಿ, ಕೊನೆಘಳಿಗೆಯಲ್ಲಿ ಟಿಕೆಟ್ ವ್ಯವಸ್ಥೆ ಮಾಡಿರುವುದು ಪಂದ್ಯಾವಳಿ ವೀಕ್ಷಣೆಗೆ ಸಹಕಾರಿಯಾಯಿತು ಎನ್ನುತ್ತಾರೆ ಕ್ರಿಕೆಟ್ ನೋಡಲು ಬೆಂಗಳೂರಿಗೆ ತೆರಳಿದ್ದ ಕಳಚೆಯ ಯುವಕರು
ಇದಕ್ಕೆಲ್ಲಾ ಕಳಚೆ ಪ್ರಿಮಿಯರ್ ಲೀಗ್ (ಕೆಪಿಲ್) ಸಂಘಟನೆಯ ಶಕ್ತಿ ಕಾರಣವಾಗಿದೆ. ಕಳಚೆಯ ಕ್ರೀಡಾ ಸಂಘಟಕರಾದ ಪ್ರಮೋದ್ ಹೆಬ್ಬಾರ್, ಪ್ರಕಾಶ್ ಹೆಗಡೆ, ರವೀಂದ್ರ ಭಾಗ್ವತ್, ನಾರಾಯಣ ಭಾಗ್ವತ, ಗಣೇಶ್ ಭಾಗ್ವತ್, ರವೀಶ್ ಭಟ್ಟ, ಮಂಜುನಾಥ್ ಹೆಗಡೆ ಹಾಗೂ ದಿಶಾ ಹೆಬ್ಬಾರ್ ಹಾಗೂ ಅದಿತಿ ಹೆಗಡೆ ಎಲ್ಲರೂ ಸೇರಿ ಸತತವಾಗಿ 2 ನೇ ವರ್ಷದ ಐಪಿಎಲ್ ಹವಾ ನೋಡಿ ಆರ್.ಸಿ.ಬಿ ತಂಡಕ್ಕೆ ಸಪೋರ್ಟ್ ಮಾಡಿ ಖುಷಿಪಟ್ಟರು.
ಇವರನ್ನು ಕಳಚೆಯ ಜನಾರ್ಧನ್ ಹೆಬ್ಬಾರ್, ವಿಶ್ವೇಶ್ವರ ಭಟ್ಟ, ಸತೀಶ್ ಹೆಗಡೆ ರವಿ ಭಟ್ಟ, ಸಂದೇಶ್ ಭಟ್ಟ, ನಿತೀಶ್ ಭಟ್ಟ ಮುಂತಾದವರು ಪ್ರೋತ್ಸಾಹಿಸಿದ್ದಾರೆ.
ಈ ಮೂಲಕ ಈ ವರ್ಷ ಮತ್ತೊಮ್ಮೆ ಕಳಚೆಯ ಹೆಸರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಮನ ಸೆಳೆದಿದೆ.