ಜೆ.ಇ.ಇ ಪರೀಕ್ಷೆಯಲ್ಲಿ ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ: ಉತ್ತರ ಕರ್ನಾಟಕಕ್ಕೆ ಪ್ರಥಮ
ವಿದ್ಯಾಕಾಶಿ ಧಾರವಾಡದಲ್ಲಿ ಹೆಸರಾಂತ ವಿದ್ಯಾಸಂಸ್ಥೆಯಾದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆ.ಇ.ಇ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅತ್ಯುತ್ತಮವೆನಿಸಿದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಫಲಿತಾಂಶದೊಂದಿಗೆ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನವನ್ನು ಅನ್ನೋಲ್ ಪ್ರಭು (99.90) ಪ್ರತಿಶತದೊಂದಿಗೆ ಆಲ್ ಇಂಡಿಯಾ ರಾಂಕಿಂಗ್ AIR ನಲ್ಲಿ 1705 ನೇ ಸ್ಥಾನವನ್ನು ಪಡೆಯುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾನೆ. ಇದರ ಜೊತೆಗೆ ಕೇದಾರ್ ಜೋಶಿ (99.84) AIR 2688), ದರ್ಶನ ಭಟ್ಟ, (99.60), (AIR 6468, EWS 760), ಅನೀಶ ನಾಯ್ಕ (99.56) (AIR 7076, OBC 1596) ಈ ನಾಲ್ಕು ವಿದ್ಯಾರ್ಥಿಗಳು ಪ್ರತಿಶತ 99ಕ್ಕಿಂತ ಹೆಚ್ಚು ಫಲಿತಾಂಶವನ್ನುಹೊಂದುವುದರೊಂದಿಗೆ ಉತ್ತಮವಾದ ಸಾಧನೆಯನ್ನು ಗೈದಿದ್ದಾರೆ .
ಉಳಿದಂತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಧ್ರುವಂತ್ ಎಸ್. ಎಂ (98.52), ವಿನೀತ ಚವಾನ್ (98.04), ಆಕಾಶ ರಾಥೋಡ್ (97.61), ಪ್ರೀತಮ್ ಚೌಹಾನ್ (96.46), ಕಾರ್ತಿಕ್ ಭಜಂತ್ರಿ (96.38), ಈಶಾನ್ ಶಾನ್ಸಾಗ್ (96.08), ನಂದನ್ ಹೆಗ್ಡೆ (95.39), ರಜತ್ ಭಟ್ (95.36), ಸೃಜನ್ ಪಾಟೀಲ್ (94.62), ಪ್ರಣತಿ ಮೆಣಸು ಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್ (93.62), ಪ್ರಗತಿ ನರೋಣಿ (93.11), 2 ?o (92.30) (92.23), (93.40), (91.52), (91.44), (92.04), ? ? (91.70), ಅಪೂರ್ವ ಹೆಗಡೆ (90.14), ಸಚಿನ್ ಜೋಶಿ (90.85), ನಿಶಾಂತ್ ನಂದವಾಡಗಿ (90.62) ಎಲ್ಲ ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಹೊಂದಿ ಸಂಸ್ಥೆಯ ಪಲಿತಾಂಶದ ಗರಿಯನ್ನು ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸುವುದರೊಂದಿಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.
ಇದರೊಂದಿಗೆ ಶೇಕಡ 99 ಕ್ಕಿಂತ ಹೆಚ್ಚು 4 ವಿದ್ಯಾರ್ಥಿಗಳು, ಶೇಕಡ 95ಕ್ಕಿಂತ ಹೆಚ್ಚು 12 ವಿದ್ಯಾರ್ಥಿಗಳು, ಶೇಕಡ 90ಕ್ಕಿಂತ ಹೆಚ್ಚು 28 ವಿದ್ಯಾರ್ಥಿಗಳು ಮತ್ತು 85ಕ್ಕಿಂತ ಹೆಚ್ಚು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರ್ಸೆಂಟೈಲ್ಮಾಡುವುದರ ಮೂಲಕ ಉತ್ತಮ ಫಲಿತಾಂಶವನ್ನು ಹೊಂದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ