ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ಕಸಬೆಯ ಶೇಡಿಕೆರೆ ಮಹಾಗಣಪತಿ ದೇವಾಲಯದಲ್ಲಿ ಗಂಟೆಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಯಲ್ಲಾಪುರ ಪಟ್ಟಣದ ಅಂಬೇಡ್ಕರ್ ನಗರದ 28 ವರ್ಷದ ಪಾತ್ರೆ ವ್ಯಾಪಾರಿ ಕೃಷ್ಣಾನಂದ ಪರಶುರಾಮ ಇಂಗಳೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ದೇವಸ್ಥಾನದ ಗಂಟೆ, ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳರು

ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಬಿಳಿ ಬಣ್ಣದ ಓಮಿನಿ ವಾಹನ ಹಾಗೂ ವಾಹನದಲ್ಲಿ 10 ಹಿತ್ತಾಳೆ ಗಂಟೆಗಳು, 10 ಹಿತ್ತಾಳೆಯ ಕೈ ಆರತಿಗಳು, ಒಂದು ತಾಮ್ರದ ಕೊಡ, 5 ಹಿತ್ತಾಳೆಯ ತಾಟುಗಳು, 2 ಹಿತ್ತಾಳೆಯ ಚೊಂಬು, 2 ಹಿತ್ತಾಳೆಯ ದೀಪಗಳು, ಐದು ಅಲ್ಯೂಮಿನಿಯಂ ತೋಪು, ಮೂರು ಸ್ಟೇಲ್ ತೋಪು, ಒಂದು ಅಲ್ಯೂಮಿನಿಯಂ ಹಂಡೆ, 2 ಅಲ್ಯೂಮಿನಿಯಂ ತೋಪುಗಳನ್ನು ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟೂ ಮೌಲ್ಯ 1,19,900 ರೂ ಎಂದು ಅಂದಾಜಿಸಲಾಗಿದೆ.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading